ಪದ್ಮಾನಗರದ ವಿಧಾನಸಭೆ ಕ್ಷೇತ್ರವಾದ ಹೊಸರಕೇರಿಹಳ್ಳಿ ವಾರ್ಡ್ ನಿಂದ ಬಿಜೆಪಿ ರಥಯಾತ್ರೆ ಆರಂಭಿಸಲಾಗಿತ್ತು.ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ಭಾಗಿಉಅಗುದ್ರು.ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ರಥಯಾತ್ರೆಯಲ್ಲಿ ಭಾಗಿಯಾಗಿದ್ರು.
ಈ ವೇಳೆ ರಥಯಾತ್ರೆ ಸಾಗುವ ವೇಳೆ ಕಾರ್ಯಕರ್ತರು ರಾಕೇಟ್ ಸಿಡಿಸಿದಾರೆ.ರಾಕೆಟ್ ಸಿಡಿಸಿದ ಪರಿಣಾಮ ತೆಂಗಿನ ಮರ ಸುಟ್ಟುಹೋಗಿದೆ.ಇಟ್ಟಮಡು ಮಾರ್ಗವಾಗಿ ಬಿಜೆಪಿ ರಥಯಾತ್ರೆ ಸಾಗುತ್ತಿತ್ತು.ರಸ್ತೆ ಪಕ್ಕದ ಮನೆಯವರ ತೆಂಗಿನ ಮರ ಬೆಂಕಿಗೆ ಅಹುತಿಯಾಗಿದ್ದು,ಇದನ್ನು ಆರ್. ಅಶೋಕ್ ಹಾಗೂ ಸಿಎಂ ಬೊಮ್ಮಾಯಿ ಗಮನಿಸಲಿಲ್ಲ.ಇದೇ ವೇಳೆ ರಥಯಾತ್ರೆ ಬೇಗ ಅಲ್ಲಿಂದ ಹೊರಟಿದೆ.ಯಾರಪ್ಪ ಮರಕ್ಕೆ ಬೆಂಕಿ ಹಚ್ಚಿದ್ದು ಅಂದ ಸಂಸದ ತೇಜಸ್ವಿ ಸೂರ್ಯ ಕೇಳಿದ್ದಾರೆ.