Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಕು ತಂದೆಯಿಂದಲೇ ಪುತ್ರಿಯ ಮೇಲೆ ರೇಪ್: ಆರೋಪಿಗೆ ಜೀವಾವಧಿ ಶಿಕ್ಷೆ

ಸಾಕು ತಂದೆಯಿಂದಲೇ ಪುತ್ರಿಯ ಮೇಲೆ ರೇಪ್: ಆರೋಪಿಗೆ ಜೀವಾವಧಿ ಶಿಕ್ಷೆ
ಕೋಲಾರ , ಬುಧವಾರ, 15 ನವೆಂಬರ್ 2017 (19:53 IST)
ಸಾಕು ತಂದೆಯೇ ಪುತ್ರಿಯ ಮೇಲೆ ರೇಪ್ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
 
ಸಾಕು ತಂದೆಯಾದ 40 ವರ್ಷ ವಯಸ್ಸಿನ ಚಂದ್ರು, ತನ್ನ ಸಾಕು ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದನು. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.
 
ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ವೈದ್ಯರ ದೂರಿನ ಮೇರೆಗೆ ಆರೋಪಿ ಚಂದ್ರು ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
 
ಇಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಅಪರಾಧಿ ಚಂದ್ರುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಕೆ.ಜೆ. ಜಾರ್ಜ್ ಜೈಲಿಗೆ ಹೋಗುವುದು ಖಚಿತ: ಈಶ್ವರಪ್ಪ