ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು ನಾವು ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿಲ್ಲ ಎಂದು ಎಚ್ ಡಿ ರೇವಣ್ಣ ಹೇಳಿದ್ದಕ್ಕೆ ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದೆಡೆ ಎಚ್ ಡಿ ರೇವಣ್ಣ ಈ ರೀತಿ ಹೇಳಿಕೆ ನೀಡಿದರೆ ಇನ್ನೊಂದೆಡೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ನಾವು ರೈತರ ಮೇಲೆ ಗೋಲಿಬಾರ್ ಮಾಡಿಲ್ಲ ಎಂದಿದ್ದರು. ಇವರಿಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಪಾಟೀಲ್ ನೀವೇನು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದೀರಾ ಎಂದು ಕಿಡಿ ಕಾರಿದ್ದಾರೆ.
’20 ತಿಂಗಳು ಮುಖ್ಯಮಂತ್ರಿಯಾಗಿ, ಹಲವು ವರ್ಷ ಶಾಸಕರಾಗಿ ಅನುಭವ ಇರುವವರು ನೀವು. ನಿಮಗೆ ಘೋಷಣೆಗಳನ್ನು ಮಾಡುವಾಗ ಯೋಚನೆ ಇರಲಿಲ್ವಾ? ಆರ್ಥಿಕ ಪರಿಸ್ಥಿತಿ ಗೊತ್ತಿರಲಿಲ್ವಾ? ಈಗ ಘೋಷಣೆ ಮಾಡಿ ಈ ರೀತಿ ಹೇಳುತ್ತಿರುವುದೇಕೆ? ಪದೇ ಪದೇ ರೈತರ ಮೇಲೆ ಅವಮಾನಕರ ಹೇಳಿಕೆ ನೀಡುವುದು ಯಾಕೆ? ಒಬ್ಬ ಮುಖ್ಯಮಂತ್ರಿಯಾಗಿ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎನ್ನುವಂತಹ ಪದ ಪ್ರಯೋಗ ಶೋಭೆ ತರುವಂತದ್ದಲ್ಲ. ಇದರ ವಿರುದ್ಧ ಉಗ್ರ ಪ್ರತಿಭಟನೆ ಮಾಡಿಯೇ ಮಾಡುತ್ತೇವೆ’ ಎಂದು ಚಾಮರಸ ಮಾಲಿ ಪಾಟೀಲ್ ಪಟ್ಟು ಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.