Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಲ್ಕು ಜಿಲ್ಲೆಯ ರೈತರಿಗೆ ವಕ್ಫ್ ಭೀತಿ: ಪಹಣಿಗಾಗಿ ಕಚೇರಿ ಮುಂದೆ ಕ್ಯೂ

Waqf Board

Krishnaveni K

ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2024 (11:47 IST)
ಬೆಂಗಳೂರು: ಕೇವಲ ವಿಜಯಪುರ ಮಾತ್ರವಲ್ಲ, ಈಗ ನಾಲ್ಕು ಜಿಲ್ಲೆಯ ರೈತರಿಗೆ ವಕ್ಫ್ ಭೀತಿ ಎದುರಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ಪರಿಶೀಲನೆಗಾಗಿ ತಹಶೀಲ್ದಾರ್ ಕಚೇರಿ ಎದುರು ಕ್ಯೂ ನಿಂತಿದ್ದಾರೆ.

ವಿಜಯಪುರ ಬಳಿಕ ಧಾರವಾಡದ ಉಪ್ಪಿನ ಬಟಗೇರಿ ಗ್ರಾಮದ ರೈತರ ಜಮೀನೂ ವಕ್ಫ್ ಎಂದು ನಮೂದಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ತಮ್ಮ ತಲೆತಲಾಂತರದಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನು ದಿಡೀರ್ ಆಗಿ ವಕ್ಫ್ ಎಂದು ನಮೂದಾಗಿದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು.

ಇನ್ನಷ್ಟು ಕೂಲಂಕುಷವಾಗಿ ನೋಡಿದಾಗ ಕೇವಲ ವಿಜಯಪುರ, ಧಾರವಾಡ ಮಾತ್ರವಲ್ಲ, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಭಯ ಶುರುವಾಗಿದೆ. ವಿಜಯಪುರ, ಧಾರವಾಡ ಮಾತ್ರವಲ್ಲದೆ ಕಲಬುರಗಿ, ಬೀದರ್, ಬಾಗಲಕೋಟೆಯಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಹಿನ್ನಲೆಯಲ್ಲಿ ಈ ಜಿಲ್ಲೆಯ ರೈತರು ತಮ್ಮ ಜಮೀನು ಪಹಣಿ ಪರಿಶೀಲನೆಗಾಗಿ ನೋಂದಣಿ ಕಚೇರಿ, ತಹಶೀಲ್ದಾರ್ ಕಚೇರಿ ಮುಂದೆ ಕ್ಯೂ ನಿಂತಿದ್ದಾರೆ. ತಮ್ಮ ಜಮೀನೂ ವಕ್ಫ್ ಆಸ್ತಿ ಎಂದು ನಮೂದಾಗಿದೆಯೇ ಎಂದು ಪರೀಲನೆ ಮಾಡಲು ಮುಂದಾಗಿದ್ದಾರೆ. ವಿಜಯಪುರದಲ್ಲಿ 124 ಕ್ಕೂ ಹೆಚ್ಚು ರೈತರ ಆಸ್ತಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಸುದ್ದಿ ಬೆನ್ನಲ್ಲೇ ಇತರೆ ಜಿಲ್ಲೆಗಳಲ್ಲೂ ಆತಂಕ ಮನೆ ಮಾಡಿದೆ.

ಇದರ ನಡುವೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಜಮೀನನ್ನು ವಕ್ಫ್ ಬೋರ್ಡ್ ಗೆ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವೆಡೆ ಅಧಿಕಾರಿಗಳ ಎಡವಟ್ಟಿನಿಂದ ವಕ್ಫ್ ಆಸ್ತಿ ಎಂದು ನಮೂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಜಯಪುರ ಪ್ರಕರಣದ ನಂತರ ರೈತರು ಈಗ ಎಚ್ಚೆತ್ತುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿತ್ರಾರ್ಜಿತ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದರೆ ರೈತರು ಏನು ಮಾಡ್ಬೇಕು