ಆತ ಹಳ್ಳಿಯ ರೈತ. ನಾಲ್ಕು ವರ್ಷಗಳಿಂದ ಮಳೆ ಬರದೇ ಸಂಕಷ್ಟದಲ್ಲಿದ್ದಾನೆ. ಬಗಾರಲ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಬರಗಾಲದ ಹೊಡೆತಕ್ಕೆ ಸಿಲುಕಿ ನಲುಗಿರುವ ರೈತ ನೇರವಾಗಿ ಪ್ರಧಾನಮಂತ್ರಿಗೆ ಟ್ವಿಟ್ ಮಾಡಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತರು ಸಂಕಷ್ಟದಲ್ಲಿದ್ದಾರೆ. 2016 ಮತ್ತು 17 ಹಾಗೂ 18 ನೇ ಸಾಲಿನಲ್ಲಿ ಪ್ರದಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮಾ ಹಣ ತುಂಬಿರುವ ರೈತರು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು ನಮಗೆ ವಿಮಾ ಹಣ ಸಂದಾಯವಾಗಿಲ್ಲ. ಹೀಗಾಗಿ ವಿಮಾ ಕಂಪನಿಗೆ ವಿಮಾ ಹಣ ನೀಡುವಂತೆ ಸೂಚಿಸಬೇಕು. ಹೀಗಂತ ಕೊಪ್ಪಳ ಜಿಲ್ಲೆಯ ಬೆಟಗೇರಿ ಗ್ರಾಮದ ರೈತ ಏಳುಕೋಟೇಶ ಕೋಮಲಾಪೂರ ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಟ್ವೀಟ್ ಮಾಡಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಅಥವಾ ಅವರ ಕಚೇರಿಯಿಂದ ಸಧ್ಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.