ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಈಗ ಅಸಲಿ ವರ್ಸಸ್ ನಕಲಿ ಬಾಡಿಗೆ ವಾಹನಗಳ ಫೈಟ್ ತಾರಕಕ್ಕೇರಿದೆ.
ಆಟೋ ಮತ್ತು ರ್ಯಾಪಿಡೋ ಬೈಕ್ ಫೈಟ್ ಒಂದು ಕಡೆಯಾದರೆ, ವೈಟ್ ಬೋರ್ಡ್ ಐಷಾರಾಮಿ ಕಾರುಗಳು ಬಾಡಿಗೆ ಓಡಿಸೋದ್ರಿಂದ ತೆರಿಗೆ ಕಟ್ಟುತ್ತಿರುವ ಹಳದಿ ಬೋರ್ಡ್ ಚಾಲಕರು ಈಗ ಬೀದಿಗೆ ಬರುವಂತಾಗಿದೆ.
ಆಡಿ, ಬೆಂಜ್, ರೇಂಜ್ ರೋವಾರ್ ಫಾರ್ಚುನರ್ ಹೀಗೆ ಸಾಲಾಗಿ ನಿಂತಿರುವ ಐಷಾರಾಮಿ ಕಾರುಗಳು ಅಸಲಿಗೆ ಬಾಡಿಗೆ ಗಾಡಿಗಳು. ಆದರೆ ವೈಟ್ ಬೋರ್ಡ್ ಹಾಕಿಕೊಂಡು ಸರ್ಕಾರಕ್ಕೂ ತೆರಿಗೆ ವಂಚಿಸಿ,
ಇತ್ತ ನಿಯತ್ತಾಗಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿ ಹಳದಿ ಫಲಕ ಹಾಕಿಕೊಂಡ ಬಾಡಿಗೆ ಚಾಲಕರಿಗೂ ದೋಖಾ ಮಾಡಿ, ಆಪ್ ಮೂಲಕ ಸೈಲೆಂಟ್ ಆಗಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆಯಂತೆ.
ಹೀಗಾಗಿ ರೊಚ್ಚಿಗೆದ್ದ ಚಾಲಕರೇ ಖುದ್ದು ಈ ಐಷಾರಾಮಿ ವಾಹನದ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ದಾಳಿ ಮಾಡಿಸಿದ್ದಾರೆ. ಕೋರಮಂಗಲ ಹೆಚ್ಎಸ್ಆರ್ ಲೇಔಟ್ ಭಾಗದಲ್ಲಿ ರೇಡ್ ನಡೆದಿದ್ದು,, ಸುಮಾರು 17ಕ್ಕೂ ಅಧಿಕ ವಾಹನವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸೀಝ್ ಮಾಡಿದ್ದಾರೆ.