Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫ್ರೀಡಂ ಪಾರ್ಕ್ ಬಳಿ ಅಸಭ್ಯ ವರ್ತನೆ ತೋರಿದ ನಕಲಿ ಸಂಪಾದಕ ಅರೆಸ್ಟ್

ಫ್ರೀಡಂ ಪಾರ್ಕ್ ಬಳಿ ಅಸಭ್ಯ ವರ್ತನೆ ತೋರಿದ ನಕಲಿ ಸಂಪಾದಕ ಅರೆಸ್ಟ್
ಬೆಂಗಳೂರು , ಬುಧವಾರ, 22 ಮಾರ್ಚ್ 2017 (13:25 IST)
ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವ ಫ್ರೀಡಂ ಪಾರ್ಕ್‌ನಲ್ಲಿ ಅಸಭ್ಯ ವರ್ತನೆ ತೋರಿ ತಾನೊಬ್ಬ ಸಂಪಾದಕ ಎಂದು ಸುಳ್ಳು ಹೇಳಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 
40 ವರ್ಷ ವಯಸ್ಸಿನ ಮುರುಳಿ ಎನ್ನುವ ವ್ಯಕ್ತಿ, ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬಳಿ ತೆರಳಿ, ಅವರನ್ನು ಏಕಾಂಗಿಯಾಗಿ ಕರೆದು ಫೋನ್ ನಂಬರ್ ಮತ್ತು ವಿಳಾಸವನ್ನು ಪಡೆದಿದ್ದಲ್ಲದೇ ಅವರ ಫೋಟೋ ಕೂಡಾ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
 
ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪೊಲೀಸರಿಗೆ ಮುರುಳಿಯ ಸಂಶಯಾಸ್ಪದ ನಡುವಳಿಕೆ ವಿಚಿತ್ರವಾಗಿ ಕಂಡಿದೆ. ಕೂಡಲೇ ಆರೋಪಿ ಮುರುಳಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
 
ಪೊಲೀಸರ ವಿಚಾರಣೆಯಲ್ಲಿ ಆರೋಪಿ ಮುರುಳಿ, ಆರಂಭದಲ್ಲಿ ಮೂರು ನಾಲ್ಕು ಪತ್ರಿಕೆಗಳ ಹೆಸರುಗಳನ್ನು ಹೇಳಿದನಾದರೂ ನಂತರ ಪೊಲೀಸರು ಸೂಕ್ಷ್ಮವಾಗಿ ವಿಚಾರಣೆ ನಡೆಸಿದಾಗ ಆತನೊಬ್ಬ ನಕಲಿ ಸಂಪಾದಕ ಎನ್ನುವುದು ಖಚಿತವಾಗಿದೆ.
 
ಆರೋಪಿ ಮುರುಳಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಮೇರ್ ದರ್ಗಾ ಸ್ಫೋಟ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ