ಸಿಎಂ ಸಚಿವಾಲಯದ ಅಧಿಕಾರಿ ಎಂದು ವಸೂಲಿಗಿಳಿದಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರಿಂದ ಉದಯಪ್ರಭು ಬಂಧನ ಮಾಡಲಾಗಿದೆ. ಸಿಎಂ ಸ್ಪೆಷಲ್ ಆಫೀಸರ್ ಎಂದು ವಂಚಿಸುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ. ಮೂಲತಃ ಚಿಕ್ಕಬಳ್ಳಾಪುರದವನಾಗಿರುವ ವಂಚಕ ಉದಯಪ್ರಭು, ಬೆಂಗಳೂರಿನ ಮೈಲಸಂದ್ರ ಬಳಿ ವಾಸವಿದ್ದ ಎಂದು ತಿಳಿದುಬಂದಿದೆ.ಬಿನ್ನಿಮಿಲ್ ಬಳಿ ಬಾಳೆಕಾಯಿ ಮಂಡಿ ನಡೆಸ್ತಿದ್ದ ಉದಯಪ್ರಭು ವರ್ಗಾವಣೆ ಮಾಡಿಸಿಕೊಡೋದಾಗಿ ಹೇಳಿ ಕೋಟಿ-ಕೋಟಿ ವಂಚಿಸ್ತಿದ್ದ ಎಂದು ತಿಳಿದುಬಂದಿದೆ. IAS, IPS, Dysp ಹೀಗೆ ಎಲ್ಲಾ ಇಲಾಖೆಯಲ್ಲೂ ವರ್ಗಾವಣೆ ಮಾಡಿ ಕೊಡುತ್ತೇನೆ. ಮಾಜಿ ಸಿಎಂ ಒಬ್ಬರ ತಂಗಿ ಮಗನ ಸ್ನೇಹಿತ ಎಂದಿರುವ ಆರೋಪಿಯನ್ನು ಬಂಧಿಸಲಾಗಿದೆ. ಕಾರಿಗೆ ಕರ್ನಾಟಕ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡು ಓಡಾಡ್ತಿದ್ದ..