ಬೆಂಗಳೂರು : ಕೊರೊನಾ ನಾಲ್ಕೆನೇ ಅಲೆಯ ಸುದ್ದಿಯೇ ಎಲ್ಲ ಕಡೆ ಕೊರೊನಾದಂತೆ ಹರಡುತ್ತಿದೆ.
ಸರ್ಕಾರವೂ ಸಹ ನಾಲ್ಕನೆ ಅಲೆಯ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಆದೇಶವನ್ನು ಜಾರಿಗೆ ತಂದಿದೆ. ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಸರ್ಕಾರ ಮಾತ್ರವಲ್ಲ ಜನರು ಸಹ ಸಿದ್ದರಾಗಬೇಕು ಎಂದು ತಜ್ಞ ವೈದ್ಯರಾದ ಡಾ.ಸತ್ಯನಾರಾಯಣ್ ಮೈಸೂರು ಕರೆ ನೀಡಿದ್ದಾರೆ.
ಕೊರೊನಾ ನಾಲ್ಕನೆ ಅಲೆಯನ್ನು ತಡೆಯೋ ಶಕ್ತಿ ನಮ್ಮ ಬಳಿಯೇ ಇದೆ. ಅದುವೇ ಮಾಸ್ಕ್ ಮತ್ತು ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಎಂದು ಸಲಹೆ ಕೊಟ್ಟಿದ್ದಾರೆ.
ಕೊರೊನಾ ಅನ್ನೋದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ವಿಶ್ವದಲ್ಲೇ ಇದೆ. ನಾವು ಮಾಸ್ಕ್ ಬಿಟ್ಟಷ್ಟು ಹೆಚ್ಚು ಕಾಡಲಿದೆ. ನಾಲ್ಕನೆಯ ಅಲೆಗೆ ಓಮಿಕ್ರಾನ್ನಿಂದ ಬಂದಿರೋ ಎಕ್ಸ್ ಇ, ಎಕ್ಸ್ ಡಿ ಮತ್ತು ಎಕ್ಸ್ ಏಫ್ ತಳಿಗಳೇ ಕಾರಣವಾಗದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.