ಕೋರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸಂಪೂರ್ಣವಾಗಿ ನಿಷೇದಾಜ್ಞೆ ಜಾರಿಯಲ್ಲಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇದಾಜ್ಞೆ ಜಾರಿಯಲ್ಲಿದೆ. ಕಲಬುರಗಿ ನಗರದಲ್ಲಿರುವ ನಿರ್ಗತಿಕರು, ಭೀಕ್ಷುಕರು ಹಾಗೂ ನಿರ್ವಸತಿಗರಿಗೆ ಆಹಾರ ಒದಗಿಸಲು ಆಹಾರ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ನಿರ್ಗತಿಕರು, ಭೀಕ್ಷುಕರು ಹಾಗೂ ನಿರ್ವಸತಿಗರಿಗೆ ಆಹಾರ ಧಾನ್ಯಗಳನ್ನು ಹಂಚಲು ಅನುಕೂಲವಾಗುವಂತೆ ಸ್ವಯಂ ಪ್ರೇರಿತರಾಗಿ ಆಹಾರ ಧಾನ್ಯಗಳನ್ನು ದಾನ ಮಾಡಲಿಚ್ಛಿಸುವ ದಾನಿಗಳು ತಾವು ನೇರವಾಗಿ ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಡಿ. ಎಂ. ಪಾಣಿ ಅವರನ್ನು ಮೊಬೈಲ್ ಸಂಖ್ಯೆ 94499 85855ಗೆ ಸಂಪರ್ಕಿಸಬಹುದು. ಕೇವಲ ದವಸ ಧಾನ್ಯಗಳನ್ನು ಮಾತ್ರ ನೀಡಬಹುದಾಗಿದೆ. ಯಾವುದೇ ರೀತಿಯ ತಯಾರಿಸಿದ ಆಹಾರವನ್ನು ನೀಡಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.