ಮಾಜಿ ಸಂಸದೆ ನಟಿ ರಮ್ಯಾಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಐಸಿಸಿಯಲ್ಲಿ ಹೊಸ ಹುದ್ದೆ ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ರಮ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಂಸದೆ ರಮ್ಯಾ ಅನಾರೋಗ್ಯದಿಂದಾಗಿ ಕೆಲ ಕಾಲ ರಾಜಕೀಯದಿಂದ ದೂರವಾಗಿದ್ದರು. ಬೇರೆ ಪಕ್ಷ ಸೇರಲಿದ್ದಾರೆ ಎನ್ನುವ ವರದಿಗಳು ಕೂಡಾ ಹರಡಿದ್ದವು
ಆದರೆ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಲ್ಲಾ ಉಹಾಪೋಹಗಳಿಗೆ ವಿರಾಮ ಹಾಕಿ ರಮ್ಯಾ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.