ಕೇರಳಕ್ಕೆ ಎಂಟ್ರಿ ನೀಡಿದೆ ನೊರೊವೈರಸ್: ಈ ಸೋಂಕು ತಗುಲಿದರೆ ಏನಾಗತ್ತೆ.?
bangalore , ಭಾನುವಾರ, 14 ನವೆಂಬರ್ 2021 (20:01 IST)
ಕೇರಳದ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13ವಿದ್ಯಾರ್ಥಿಗಳಿಗೆ ಅಪರೂಪದ ನೊರೊವೈರಸ್ ಸೋಂಕು ಕಾಣಿಸಿಕೊಂಡಿದ್ದು, ಜನರು ಈ ಬಗ್ಗೆ ಜಾಗರೂಕರಾಗಿರಲು ಆರೋಗ್ಯ ಇಲಾಖೆ ಸೂಚಿಸಿದೆ.
ಈ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವಂಥದ್ದಾಗಿದ್ದು, ನೀರಿನಿಂದ ಈ ಕಾಯಿಲೆ ಬರುತ್ತದೆ.
ಮೂರರಿಂದ ನಾಲ್ಕು ದಿನದವರೆಗೆ ಸೋಂಕು ಬಾಧಿಸಲಿದೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿದ್ದು, ಯಾರೂ ಈ ಬಗ್ಗೆ ಭಯಭೀತರಾಗುವ ಅವಶ್ಯ ಇಲ್ಲ. ಎಚ್ಚರಿಕೆಯಿಂದಿರಿ. ಕುಡಿಯುವ ನೀರಿನ ಮೂಲಗಳು ಶುದ್ಧವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ.
ನೊರೊವೈರಸ್ ಸೋಂಕು ತಗುಲಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣುತ್ತವೆ. ಕರುಳಿನ ಲೋಳೆಪೊರೆಯಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ತೀವ್ರವಾದ ವಾಂತಿ, ಬೇಧಿ ಆಗುತ್ತದೆ. ವಾಕರಿಗೆ, ಜ್ವರ, ತಲೆನೋವು ಹೆಚ್ಚಿರುತ್ತದೆ. ನೀರಿನಿಂದ ಈ ಕಾಯಿಲೆ ಹರಡುತ್ತದೆ. ಆಹಾರದ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಯ ವಾಂತಿಯಿಂದ ಈ ಕಾಯಿಲೆ ಅತಿ ವೇಗವಾಗಿ ಹರಡುತ್ತದೆ.
ಮುಂದಿನ ಸುದ್ದಿ