Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶುರು

ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶುರು
ಬೆಂಗಳೂರು , ಶುಕ್ರವಾರ, 14 ಜೂನ್ 2019 (14:42 IST)
ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 1 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಹಾಗೂ 100 ಹೊಸ ಕರ್ನಾಟಕ ಪಬ್ಲಿಕ್ ‌ಶಾಲೆಗಳ ಪ್ರಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುತ್ತಿರುವುದರಿಂದ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಯಾರೂ ಭಾವಿಸಬಾರದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ವಿಧಾನಸೌಧದ ಬ್ಯಾಂಕ್ಟೆಟ್‌ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 1 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಹಾಗೂ 100 ಹೊಸ ಕರ್ನಾಟಕ ಪಬ್ಲಿಕ್ ‌ಶಾಲೆಗಳ ಪ್ರಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾತೃಭಾಷೆಯನ್ನು ರಕ್ಷಣೆ ಮಾಡುವ ಜೊತೆ ಜೊತೆಗೆ ಸರಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ತೆರೆಯಲಾಗಿದೆ.
ಪ್ರಸ್ತುತ ಸ್ಮರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮ ಅವಶ್ಯಕ.‌

ಸರಕಾರಿ ಶಾಲೆ ಬಗ್ಗೆ ನಿರ್ಲಕ್ಷ್ಯ ಬೇಡ. ನಾವೆಲ್ಲರೂ ಸಹ ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದಿದ್ದು.
ಗೊಲ್ಲಹಳ್ಳಿ ಎಂಬ ಹಳ್ಳಿಯ ಸರಕಾರಿ ಶಾಲೆಯಲ್ಲಿ ಓದಿದ ನಾನು ಆಸ್ಟ್ರೇಲಿಯಾದಲ್ಲಿ ಡಾಕ್ಟರೇಟ್‌ ಮಾಡಿದ್ದೇನೆ.‌ ಸರಕಾರಿ ಶಾಲೆ ಎಂದೂ ನಿರ್ಲಕ್ಷ್ಯ ಆಗಬಾರದು ಎಂದರು. 

ಇಡೀ ದೇಶದಲ್ಲಿ ಕರ್ನಾಟಕ ಶಿಕ್ಷಣದಲ್ಲಿ ಮಾದರಿ ರಾಜ್ಯ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ 
1200 ಕೋಟಿ ರೂ.ಗಳನ್ನು ಸರಕಾರಿ ಶಾಲೆಗಳ ಆಧುನೀಕರಣಕ್ಕೆ ಮೀಸಲಿಟ್ಟಿದೆ. ನಮ್ಮ‌ಸರಕಾರದ ಆದ್ಯತೆ ಶಿಕ್ಷಣ ಕ್ಷೇತ್ರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ರೋಷನ್‌ ಬೇಗ್‌ ಇತರರು ಉಪಸ್ಥಿತರಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸಂಪುಟಕ್ಕೆ ಶಂಕರ್, ಹೆಚ್.ನಾಗೇಶ್ ಸೇರ್ಪಡೆ; ಪ್ರಮಾಣ ವಚನ ಸ್ವೀಕಾರ