ಭಾರತೀಯ ರೈಲ್ವೆಯನ್ನು ವಿದ್ಯುದೀಕರಣಗೊಳಿಸುವ ರೈಲ್ವೆ ಇಲಾಖೆಯ ಯೋಜನೆ ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ.
ರೈಲ್ವೆ ಉತ್ತರ ವಿಭಾಗ ಶೇ.70ಕ್ಕಿಂತ ಹೆಚ್ಚು ಮಾರ್ಗ ಈಗ ವಿದ್ಯುದೀಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಶೇ.100ರಷ್ಟು ರೈಲ್ವೆ ಮಾರ್ಗವನ್ನು ವಿದ್ಯುದೀಕರಿಸುವ ಕಡೆ ಸಚಿವಾಲಯ ಕೆಲಸ ಮಾಡುತ್ತಿದೆ. ಅಗತ್ಯವಿರುವ ವಿದ್ಯುತ್ ಅನ್ನು ಅಗ್ಗದ ದರದಲ್ಲಿ ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಿಂದ ವಿದ್ಯುತ್ ಸಂಗ್ರಹಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ರೈಲ್ವೆ ಉತ್ತರ ವಿಭಾಗವು ಪರಿಸರ ಸ್ನೇಹಿ ಹೆಡ್ ಆನ್ ಜನರೇಷನ್ (HOG) ಅನ್ನು ಎಲ್ಲಾ 90 ರೈಲುಗಳಿಗೆ ಅಳವಡಿಸಲಾಗಿದೆ. ಇದರಿಂದ ನಾಲ್ಕು ತಿಂಗಳಲ್ಲಿ 33 ಕೋಟಿ ರೂ. ಮೌಲ್ಯದ ಹೈ-ಸ್ಪೀಡ್ ಡೀಸೆಲ್ ಉಳಿತಾಯವಾಗಿದ್ದು, 12 ಸಾವಿರ ಟನ್ ಇಂಗಾಲ ಕ್ರೆಡಿಟ್ ಸಿಕ್ಕಿದೆ.
ರೈಲ್ವೆ ಜೋನ್ ಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ರೈಲ್ವೆಗಾಗಿ ಸ್ಥಾಪಿಸಲಾಗಿದ್ದು, ಇದರಿಂದ ಸುಮಾರು 40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಲ್ಲಿ ಬರೋಬ್ಬರಿ 3,251 ಟನ್ ಇಂಗಾಲ ಹೊರಸೂಸುವಿಕೆ ಕಡಿತಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.