ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂತ ನಿಗಧಿಯಾಗಿದ್ದು, ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ವಿರುದ್ಧ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ವೆಂಕಟನಾರಾಯಣ ಅವರ ವಿರುದ್ಧ ಆರೋಪಗಳ ಕೇಳಿ ಬಂದ ಕೂಡ್ಲೇ ನೈತಿಕತೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಆದ್ರೆ, ಸದ್ಯ ವಂಚನೆ ಆರೋಪ ಎದುರಿಸುತ್ತಿರೋ ಅಶೋಕ್ ಹಾರನಹಳ್ಳಿ ಯಾವ ನೈತಿಕತೆಯಿಂದ ಅಖಿಲ ಬ್ರಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೋ ಗೊತ್ತಿಲ್ಲ. ಅದರ ಜೊತೆಗೆ ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಜನರ ಆಶೋತ್ತರಗಳಿಗೆ ದ್ರೋಹ ಬಗೆದು ಅಶೋಕ್ ಹಾರನಹಳ್ಳಿ ಪರ ನಿಂತಿದ್ದಾರೆ. ಈಗಾಗ್ಲೇ ಮಲೆನಾಡು ಎಜುಕೇಷನಲ್ ಟ್ರಸ್ಟ್ ಹಗರಣಕ್ಕೆ ಸಂಬಂಧಿಸಿದಂತೆ ಅಶೋಕ್ ಹಾರನಹಳ್ಳಿ ವಿರುದ್ಧ ಕೇಸ್ ದಾಖಲಾಗಿದೆ. ಅಂತಹ ವ್ಯಕ್ತಿಗಳು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗುವುದಕ್ಕೆ ಯಾವುದೇ ನೈತಿಕತೆ ಇಲ್ಲ. ಈಗಾಗಿ ಹೀಗಾಗ್ಲೇ ಅಲಂಕರಿಸಿರುವ ಬ್ರಾಹ್ಮಣ ಮಹಾಸಭಾದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೇ ಸಲ್ಲಿಸುವಂತೆ ಸುದ್ದಿಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕನಾಥ್ ಆಗ್ರಹಿಸಿದ್ದಾರೆ.