Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಮರ್ಥ ವಾದ ಮಂಡನೆಯಾಗಿಲ್ಲ, ಅದ್ಕೆ ಯಡಿಯೂರಪ್ಪಗೆ ಕ್ಲೀನ್ ಚಿಟ್ ಸಿಕ್ತು

ಸಮರ್ಥ ವಾದ ಮಂಡನೆಯಾಗಿಲ್ಲ, ಅದ್ಕೆ ಯಡಿಯೂರಪ್ಪಗೆ ಕ್ಲೀನ್ ಚಿಟ್ ಸಿಕ್ತು
ಹುಬ್ಬಳ್ಳಿ , ಬುಧವಾರ, 26 ಅಕ್ಟೋಬರ್ 2016 (13:50 IST)

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದ್ದ ಪ್ರಕರಣದ ವಿರುದ್ಧ  ವಕೀಲರು ಸಮರ್ಥವಾಗಿ ವಾದ ಮಂಡಿಸದೇ ಇರುವುದರಿಂದ ನ್ಯಾಯಾಲಯದಲ್ಲಿ ಯಡಿಯೂರಪ್ಪರಿಗೆ ಕ್ಲೀನ್ ಚಿಟ್ ದೊರೆತಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹೀರೇಮಠ ಆರೋಪಿಸಿದ್ದಾರೆ.
 


 

ನಗರದಲ್ಲಿ ಬುಧವಾರ ಮಾತನಾಡಿದ ಅವರು, ಯಡಿಯೂರಪ್ಪರಿಗೆ ಕ್ಲೀನ್ ಚಿಟ್ ದೊರೆಯಲು ಮುಖ್ಯ ಕಾರಣ, ಅವರ ವಿರುದ್ಧ ವಕೀಲರು ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದ್ದು. ಆದೆ, ನ್ಯಾಯಾಧೀಶರು ಯಾವ ಅಂಕಿ-ಅಂಶಗಳನ್ನು ಇಟ್ಟುಕೊಂಡು ಆದೇಶ ನೀಡಿದ್ದಾರೆ ಎನ್ನುವುದು ಇನ್ನೂ ತಿಳೀದು ಬಂದಿಲ್ಲ. ಆದೇಶ ಪ್ರತಿ ಕೈಗೆ ಬರುವ ಪೂರ್ವದಲ್ಲಿ ಹೆಚ್ಚಿಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆದೇಶ ಪ್ರತಿಯನ್ನೊಮ್ಮೆ ಓದಿ ಮುಂದಿನದನ್ನು ಹೇಳುತ್ತೇನೆ ಎಂದರು.

 

ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪರ ತಪ್ಪು ಎದ್ದು ಕಾಣುತ್ತಿದೆ. ಆದರೆ, ನ್ಯಾಯಾಲಯದ ಆದೇಶ ಅಚ್ಚರಿ ತಂದಿದೆ. ಸತ್ಯಕ್ಕೆ ಎಂದಿಗೂ ನ್ಯಾಯ ದೊರಕೇ ದೊರಕುತ್ತದೆ. ಅದಕ್ಕೆ ಎಂದೂ ಸೋಲಿಲ್ಲ ಎಂದು ನಂಬಿದ ವ್ಯಕ್ತಿ ನಾನು. ನ್ಯಾಯಾಲಯದ ಮೇಲೆ ಅಪಾರ ನಂಬಿಕೆಯಿದೆ. ದೇಹದಲ್ಲಿ ಒಂದು ಹನಿ ರಕ್ತ ಇರುವವರೆಗೂ ನಾನು ಹೋರಾಡುತ್ತೇನೆ ಎಂದು ಹಿರೇಮಠ ಹೇಳಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಕೊರಳಿಗೆ ಹಾವು ಸುತ್ತಿಕೊಳ್ಳುತ್ತಿದ್ದಂತೆ ಆಕೆಯಾದಳು ನಾಗದೇವತೆ( ವಿಡಿಯೋ)