2023-24ನೇ ಸಾಲಿನ ಸರ್ಕಾರಿ ಶಾಲೆಗಳ ಅನುದಾನ ಹೆಚ್ಚಿಸಿ ಅಂತಾ ಶಿಕ್ಷಣ ಸುಧಾರಣೆ ಸಲಹೆಗಾರರಾದ ಪ್ರೊ.ಎಂ.ಆರ್.ದೊರೆಸ್ವಾಮಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದ 30 ಸಾವಿರ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಅಂತಾ ಉಲ್ಲೇಖಿಸಿರೋ ಅವರು, ಸರ್ಕಾರ ಈಗ ಬಜೆಟ್ ನಲ್ಲಿ ನೀಡಿರೋ ಅನುದಾನ ಸಾಕಾಗಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ 310 ಕೋಟಿ ಅನುದಾನ ನೀಡಿರೋದು ಕೊರತೆ ನೀಗಲು ಸಾಕಾಗಲ್ಲ ಅಂತಾ ಬರೆದಿರೋ ಅವರು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಹೇಳಿದ್ದನ್ನು ಉಲ್ಲೇಖಿಸಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಅನುದಾನ ಹೆಚ್ಚಳ ಮಾಡಬೇಕು ಅಂತಾ ಮನವಿ ಮಾಡಿದ್ದಾರೆ.