Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದ ಶಿಕ್ಷಣ ಸಚಿವರಿಗೆ ಪ್ರತಿ ವರ್ಷ 5-10 ಕೋಟಿ ರೂ ಕಪ್ಪ.: ಪ.ಯು.ಗಣೇಶ್ ಗಂಭೀರ ಆರೋಪ

ರಾಜ್ಯದ ಶಿಕ್ಷಣ ಸಚಿವರಿಗೆ ಪ್ರತಿ ವರ್ಷ 5-10 ಕೋಟಿ ರೂ ಕಪ್ಪ.: ಪ.ಯು.ಗಣೇಶ್ ಗಂಭೀರ ಆರೋಪ
ಹೊಸಪೇಟೆ , ಬುಧವಾರ, 19 ಜುಲೈ 2017 (15:29 IST)
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕವಾಗಿ 5-10 ಕೋಟಿ ರೂಪಾಯಿ ಕಪ್ಪವನ್ನು ಸಂದಾಯ ಮಾಡುತ್ತಿವೆ ಎನ್ನುವ ಗಂಭೀರ ಆರೋಪವನ್ನ ಹೊಸಪೇಟೆ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಪ.ಯು.ಗಣೇಶ್ ಮಾಡಿದ್ದಾರೆ. ಈ ಸಂಬಂಧಿತ ಸಿಡಿಯೊಂದನ್ನ ಮಾಧ್ಯಮಗಳ ಮುಂದಿಟ್ಟಿದ್ದಾರೆ
 
ಹೊಸಪೇಟೆಯ ಚೈತನ್ಯ ಟೆಕ್ನೋ ಸಂಸ್ಥೆಯ ಅಡಳಿತಾಧಿಕಾರಿ ವೆಂಕಟಶಿವು ಅವರೊಂದಿಗೆ ಗಣೇಶ್ ನಡೆಸಿದ ಸ್ಟ್ರಿಂಗ್ ಆಪರೇಶನ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ಸ್ಫೋಟಗೊಂಡಿದೆ. 
 
ರಾಜ್ಯದಲ್ಲಿ ಖಾಸಗಿಯಾಗಿ 400 ಕಾಲೇಜುಗಳು, 300 ಶಾಲೆಗಳಿವೆ. ಹೊಸಪೇಟೆಯ ಚೈತನ್ಯ ಟೆಕ್ನೋ ಸಂಸ್ಥೆ, ಬಿರ್ಲಾ ಗ್ರೂಪ್ ಆಫ್ ಸ್ಕೂಲ್‌ ಸೇರಿದಂತೆ ಸಾವಿರಾರು ಖಾಸಗಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ ಸಾವಿರಾರು ಕೋಟಿ ರೂ.ದೇಣಿಗೆ ಸಂಗ್ರಹಿಸುತ್ತಿವೆ. ಸಂಗ್ರಹಿಸಿದ ಹಣದಲ್ಲಿ ಅಲ್ಪ ಹಣವನ್ನು ಸರಕಾರಕ್ಕೆ, ಶಿಕ್ಷಣ ಸಚಿವರಿಗೆ ನೀಡಲಾಗುತ್ತದೆ ಎನ್ನುವದು ಆರೋಪ.
 
 ಚುನಾವಣೆಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾರ್ಟಿ ಫಂಡ್ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಸಚಿವರು ಸೇರಿದಂತೆ ಸರಕಾರಕ್ಕೆ ಹಣ ಸಂದಾಯ ಮಾಡಲಾಗುತ್ತದೆ ಎನ್ನುವ ಆಘಾತಕಾರಿ ಅಂಶವನ್ನು ಚೈತನ್ಯ ಟೆಕ್ನೋ ಸಂಸ್ಥೆಯ ಅಡಳಿತಾಧಿಕಾರಿ ವೆಂಕಟಶಿವು ನೀಡಿದ ಹೇಳಿಕೆ ಮೊಬೈಲ್ ರಿಕಾರ್ಡಿಂಗ್‌ನಲ್ಲಿ ದಾಖಲಾಗಿದೆ ಎನ್ನಲಾಗಿದೆ.. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ರಾಸಲೀಲೆ ಬಯಲು ಮಾಡಿದ ವಿದ್ಯಾರ್ಥಿನಿ..!