ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಶಾಲೆಗಳು ಮತ್ತೆ ಬಂದ್ ಆಗಬಹುದೇ ಎಂದು ಜನರ ಆಲೋಚನೆಗೆ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜ್ಯದಲ್ಲಿ ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಚಿಂತನೆ ಇಲ್ಲ, ಕಳೆದ ಎರಡು ವರ್ಷಗಳಲ್ಲಿ ಶಾಲಾ-ಕಾಲೇಜುಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಪರೀಕ್ಷೆಗಳು ಸರಿಯಾಗಿ ನಡೆದಿಲ್ಲ. ಬರುವ ಫೆಬ್ರುವರಿ ಮಾರ್ಚ್ ನಲ್ಲಿ ತಜ್ಞರು ಹೇಳುವ ಪ್ರಕಾರ ಕೋವಿಡ್ ಸೋಂಕು ಕಮ್ಮಿಯಾಗಲಿದೆ. ಆದ್ದರಿಂದ ಪೋಷಕರು ಭಯ ಪಡುವ ಅಗತ್ಯವಿಲ್ಲ. ಪಾಸಿಟಿವಿಟಿ ದರ ಶೇಕಡಾ ಐದಕ್ಕಿಂತ ಹೆಚ್ಚಿದ್ದರೆ ಮಾತ್ರ ಬಂದ್ ಮಾಡುವ ಚಿಂತನೆಯ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.