ಬೆಂಗಳೂರು: ಮೇಕ್ ಇನ್ ಇಂಡಿಯಾ ಧ್ಯೇಯ ವಾಕ್ಯದೊಂದಿಗೆ ನಿರ್ಮಿಸಲಾದ ಪರಿಸರ ಸ್ನೇಹಿ ಎಲ್ಮೊ ಇ - ಸ್ಕೂಟರ್ ಅನ್ನು ಸಂಸದ ತೇಜಸ್ವಿಸೂರ್ಯ ಇಂದು ನಗರದಲ್ಲಿ ಚಾಲನೆ ನೀಡಿದರು.
ಇಂದಿನಿಂದ ಮಾರುಕಟ್ಟೆ ಗೆ ಅಪೆಕ್ಟ್ ಮೋಟರ್ಸ್ ಸಂಸ್ಥೆಯ ಎಲ್ಮೊ ಇ- ಸ್ಕೂಟರ್( ಎಲೆಕ್ಟ್ರಿಕ್ ವೆಹಿಕಲ್) ಲಗ್ಗೆ ಇಟ್ಟಿದೆ. ನಗರದ ಖಾಸಗಿ ಹೊಟೇಲ್ ನಡೆದ ಸರಳ ಸಮಾರಂಭದಲ್ಲಿ ಎಲೆಕ್ಟ್ರಿಕ್ ಬೈಕ್ ಗಳನ್ನು ಲಾಂಚ್ ಮಾಡಲಾಯಿತು.
ಪರಿಸರ ಸ್ನೇಹಿ ಹಾಗೂ ವಾಹನ ಸವಾರರ ಸುರಕ್ಷತೆಯನ್ನು ಇಟ್ಟು ಕೊಂಡು ಮಾರುಕಟ್ಟೆಗೆ ಎಲೆಕ್ಟ್ರಿಕ್ ದ್ವೀಚಕ್ರ ವಾಹನ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೋ ರೂಂ ತೆರೆಯಲು ಮುಂದಾಗಿದೆ. ಇನ್ನೂ ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡಿದ ಬೈಕ್ ನ ದರದಲ್ಲಿ ಐದು ಸಾವಿರ ರೂ ಅನ್ನು ಸೇನೆಯ ರಿಲೀಫ್ ಫನ್ಡ್ ಗೆ ನೀಡಲು ಸಂಸ್ಥೆ ನಿರ್ಧರಿಸಿದೆ.