ಈಶ್ವರಪ್ಪ ಆಪ್ತ ಸಹಾಯಕ ವಿನಯ್‌ನನ್ನು ಅಪಹರಿಸಲು ವಿಫಲಯತ್ನ ನಡೆಸಿ ಹಲ್ಲೆಗೈದಿದ್ದ ಆರೋಪದ ಮೇಲೆ ರಾಜೇಂದ್ರ ಅರಸ್ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಕಳೆದ ಮೇ 11 ರಂದು ಕೆಲ ದುಷ್ಕರ್ಮಿಗಳ ತಂಡ ವಿನಯ್‌ರನ್ನು ಅಪಹರಿಸಲು ಪ್ರಯತ್ನಿಸಿತ್ತು. ಆದರೆ, ವಿನಯ್ ಜೋರಾಗಿ ಕೂಗಿದ್ದರಿಂದ ಸ್ಥಳೀಯರು ಆಗಮಿಸಿದಾಗ ಆರೋಪಿಗಳು ಪರಾರಿಯಾಗಿದ್ದರು.
ನಿನ್ನೆ ಸಹಾ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸ್ ಅಧಿಕಾರಿಗಳು ರಾಜೇಂದ್ರನನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಲು ಅನುವಾಗುತ್ತಿದ್ದಂತೆ ರಾಜೇಂದ್ರ ಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಒಂದು ಕಡೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಮಧ್ಯೆ ಕಚ್ಚಾಟವಿದ್ದರೆ, ಮತ್ತೊಂದೆಡೆ ಅವರಿಬ್ಬರ ಆಪ್ತರ ನಡುವೆ ವೈಮನಸ್ಸಿರುವುದು ವಿಚಿತ್ರವಾಗಿದೆ. ಯಾವ ಕಾರಣಕ್ಕೆ ವಿನಯ್‌ರನ್ನು ಅಪಹರಿಸಲು ಯತ್ನಿಸಲಾಯಿತು. ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.