ರಾಜ್ಯದಲ್ಲಿ ನೀರಿನ ಸಮಸ್ಯೆಗಳು ಇರುವ ಕಡೆ ನಾವು ಹೋಗುತ್ತಿಲ್ಲ. ಬರಪರಿಸ್ಥಿತಿಯನ್ನು ಬಿಜೆಪಿ ಕೂಡಾ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಾರ್ಯಕರ್ತರು ಕೂಡಾ ಜನತೆಯ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪಗೆ ಟಾಂಗ್ ನೀಡಿದರು.
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ನಿರ್ಣಯ ಮಂಡಿಸಿದ ಈಶ್ವರಪ್ಪ, ಸರಕಾರ ಬರಗಾಲ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ನಾವು ಕೂಡಾ ಎಡವಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು
ರಾಜ್ಯ ಕಾರ್ಯಕಾರಿಣಿಯ ಎರಡನೇ ದಿನವಾದ ಇಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬರಗಾಲದ ಪರಿಸ್ಥಿತಿ ಕುರಿತು ನಿರ್ಣಯ ಮಂಡಿಸಿದರು.
ರಾಜ್ಯ ಸರಕಾರ ಬರಗಾಲದಿಂದಾಗಿ ಕಂಗೆಟ್ಟಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಾಯಕರು ಜನರ ಕಷ್ಟ ಕೇಳಬೇಕಾಗಿತ್ತು ಎಂದು ತಮ್ಮದೇ ಪಕ್ಷದ ವಿರುದ್ಧ ಗುಡುಗಿದರು.
ಯಡಿಯೂರಪ್ಪ ಮತ್ತು ಈಶ್ವರಪ್ಪ ಇಂದು ಕೂಡಾ ಪರಸ್ಪರ ಮಾತನಾಡದೇ ಮೌನವಹಿಸಿರುವುದು ಮುಂದುವರಿಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.