ಇಂದು ದೇಶಾದ್ಯಂತ ದಸರಾವನ್ನು ಆಚರಿಸಲಾಗುತ್ತಿದ್ದು, ಪಂಜಾಬ್‌ನ ಅಮೃತಸರ ನಿವಾಸಿಗಳು ರಾವಣ, ಕುಂಭಕರ್ಣ, ಮೇಘನಾದ ಜತೆ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರ ಪ್ರತಿಮೆಯನ್ನು ಸಹ ದಹಿಸಲು ನಿರ್ಧರಿಸಿದ್ದಾರೆ.
ಪಾಕಿಸ್ತಾನ ಧ್ವಜದಿಂದ ಸುತ್ತಿದ ಶರೀಫ್ ಪ್ರತಿಮೆ ಅಮೃತಸರ್‌ದಾದ್ಯಂತ ಕಂಡುಬರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಬಿನೇಟ್ ಸಚಿವ ಅನಿಲ್ ಜೋಶಿ, ಪಾಕ್ ಉಗ್ರವಾದವನ್ನು ಪ್ರಚೋದಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇತರ ರಾಕ್ಷಸರ ಪ್ರತಿಕೃತಿ ಜತೆ ಶರೀಫ್ ಪ್ರತಿಮೆಯನ್ನು ಸಹ ದಹಿಸಲಾಗುತ್ತಿದೆ. ಈ ಸಂದೇಶ ಪಾಕ್‌ನ್ನು ತಲುಪಲಿದೆ ಎಂಬ ವಿಶ್ವಾಸ ನಮ್ಮದು ಎಂದಿದ್ದಾರೆ.
ಕಳೆದ ತಿಂಗಳ ಅಂತ್ಯದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೈನಿಕರು ನಡೆಸಿರುವ ಸೀಮಿತ ದಾಳಿಯ ಗುಂಗಿನಲ್ಲೇ ಇರುವ ದೇಶವಾಸಿಗಳು ಈ ಬಾರಿಯ ದಸರಾದಲ್ಲಿ ರಾಕ್ಷಸರ ಸಾಲಿನಲ್ಲಿ ಉಗ್ರವಾದದ ಸಂಕೇತವನ್ನು ಸಹ ದಹಿಸುತ್ತಿದ್ದಾರೆ. ಅಮೃತಸರ್ ಅಷ್ಟೇ ಅಲ್ಲ, ದೇಶದ ಇತರ ಕಡೆಗಳಲ್ಲಿ ಕೂಡ ಪ್ರತಿಮೆ ನಿರ್ಮಿಸಿ ಕೊಡುವವರಿಗೆ ಉಗ್ರವಾದದ ಪ್ರತ್ಯೇಕ ಪ್ರತಿಮೆ ಅಥವಾ ಉಗ್ರವಾದ ವಿರೋಧಿ ಘೋಷಣೆಗಳಿರುವ ರಾಕ್ಷಸ ರಾಜ ರಾವಣನ ಪ್ರತಿಮೆಯನ್ನು ನಿರ್ಮಿಸಿ ಕೊಡುವಂತೆ ಗ್ರಾಹಕರು ಬೇಡಿಕೆಯನ್ನಿಟ್ಟಿದ್ದಾರೆ.
ಗಡಿ ಭಾಗದ ಉರಿ ಸೇನಾನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ. ಸೆಪ್ಟೆಂಬರ್ 28 ಮತ್ತು 29ರ ನಡುವಿನ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿ ಅನಿರ್ದಿಷ್ಟ ಸಂಖ್ಯೆಯಲ್ಲಿ ಉಗ್ರರ ರುಂಡ ಚೆಂಡಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ