Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ಯಾಟರಿ ಬೆಳಕಲ್ಲಿ ಬರ ಅಧ್ಯಯನ ನಡೆಸಿದರು, ರೈತರ ಆಕ್ರೋಶಕ್ಕೆ ಕಾರಣರಾದರು

ಬ್ಯಾಟರಿ ಬೆಳಕಲ್ಲಿ ಬರ ಅಧ್ಯಯನ ನಡೆಸಿದರು, ರೈತರ ಆಕ್ರೋಶಕ್ಕೆ ಕಾರಣರಾದರು
ದಾವಣಗೆರೆ , ಶನಿವಾರ, 5 ನವೆಂಬರ್ 2016 (10:11 IST)
ದಾವಣಗೆರೆ: ಮೊದಲೇ ಬರದಿಂದ ರೈತರು ಕೆಂಗೆಟ್ಟು ಹೋಗಿದ್ದರು. ಕೇಂದ್ರ ಬರ ಅಧ್ಯಯನ ತಂಡವತಮ್ಮ ಅಳಲನ್ನು ಆಲಿಸುತ್ತದೆ ಎಂದು ಮುಂಜಾನೆಯಿಂದ ಕಾದು ಕುಳಿತಿದ್ದರು‌. ಆದರೆ, ತಂಡ ಬಂದಿದ್ದು ಕತ್ತಲಾವರಿಸಿದ ಬಳಿಕ.
ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ರೈತರ ಹೊಲಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಶುಕ್ರವಾರ ರಾತ್ರಿ 6.39ರ ವೇಳೆ ಭೇಟಿ ನೀಡತ್ತು. ಬ್ಯಾಟರಿ ಬೆಳಕಿನಲ್ಲಿ ಬೆಳೆ ಹಾನಿ ವೀಕ್ಷಿಸಿ, ಕಾಟಾಚಾರಕ್ಕೆಂಬಂತೆ ಒಂದಿಬ್ಬರುವ ರೈತರನ್ನು ಮಾತನಾಡಿಸಿ ಕಾಮಕೇತನ ಹಳ್ಳಿಗೆ ತೆರಳಿತು. ಅಂದರೆ ಕೇವಲ ಹದಿನೈದು ನಿಮಿಷಗಳಲ್ಲಿ ಅದು ಕೂಡಾ ಆ ಕತ್ತಲಲ್ಲಿ ಪರಿಶೀಲನೆ ನಡೆಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
 
ಬರ ಅಧ್ಯಯನ ತಂಡ ರಾತ್ರಿ ಭೇಟಿ ನೀಡಿರುವುದರಿಂದ ವಾಸ್ತವ ಸ್ಥಿತಿ ಅರಿಯಲು ವಿಫಲವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಜಾನೆಯಿಂದಲೇ ರೈತರು ತಮ್ಮ ಹೊಲಗಳಲ್ಲಿ ಬೀಡುಬಿಟ್ಟು ತಂಡಕ್ಕೆ ಕಾಯುತ್ತಿದ್ದರು. ಕತ್ತಲಾದ ಬಳಿಕ ಸಂಜೆ 6.35ಕ್ಕೆ ತಂಡ ರೈತರ ಹೊಲಕ್ಕೆ ಬಂದು, ಮೊಬೈಲ್ ಹಾಗೂ ಬ್ಯಾಟರಿ ಬೆಳಕಿನಲ್ಲಿ ಬೆಳೆ ಹಾನಿಯನ್ನು ವೀಕ್ಷಣೆ ನಡೆಸಿತು. ಹೀಗೆ ಬಂದು ಹಾಗೆ ಹೋಗುವುದಾದರೆ ಯಾಕೆ ಬರಬೇಕಿತ್ತು ಎನ್ನುವುದು ರೈತರ ಪ್ರಶ್ನೆ.
 
ಹದಿನೈದು ದಿನದೊಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ನೀರಜಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಗಳೂರು ಶಾಸಕ ಎಚ್.ಪಿ. ರಾಜೇಶ್ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ?