Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ತುಮಕೂರು , ಮಂಗಳವಾರ, 11 ಅಕ್ಟೋಬರ್ 2016 (12:13 IST)
ಖಾಸಗಿ ಬಸ್ ಚಾಲಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ 70 ಪ್ರಮಾಣಿಕರ ಪ್ರಾಣ ಕಾಪಾಡಿದ ಘಟನೆ ತುಮಕೂರಿನಲ್ಲಿ ವರದಿಯಾಗಿದೆ. 
ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಈ ಘಟನೆ ನೆಡೆದಿದ್ದು, ಬೆಂಗಳೂರಿನಿಂದ ಹೊಸಕೋಟೆಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರ ಸ್ಟೇರಿಂಗ್ ರಾಡ್ ಕಟ್ ಆಗಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ಗೋವಿಂದರಾಜು, ಸ್ಟೇರಿಂಗ್ ರಾಡ್ ಕಟ್ ಆಗುತ್ತಿದ್ದಂತೆ ರಸ್ತೆ ಬದಿ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ.
 
ಸ್ಟೇರಿಂಗ್ ರಾಡ್ ಕಟ್ ಆಗಿದ್ದರಿಂದ ಬಸ್ ಪಲ್ಟಿಯಾಗ ಸಂಭವವಿತ್ತು. ಆದರೆ, ಪ್ರಯಾಣಿಕರಿಗೆ ಸ್ವಲ್ಪವೂ ತೊಂದರೆಯಾಗದಂತೆ ಚಾಲಕ ಎಲ್ಲರನ್ನೂ ಕಾಪಾಡಿದ್ದಾರೆ. 
 
ಚಾಲಕ ಗೋವಿಂದರಾಜು ಸಮಯ ಪ್ರಜ್ಞೆಯಿಂದ ವಿಜಯದಶಮಿ ದಿನದಂದು ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ