ಕುಡಿಯುವ ನೀರು ಮೂಲಭೂತ ಹಕ್ಕು ಎಂದು ಸದನದ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಣಗುತ್ತಿರುವ ರೈತರ ಬೆಳೆಗೆ ನೀರು ಬಿಡಬೇಕಾಗಿದೆ. ರೈತರಿಗೆ ನೀರು ಬಿಟ್ಟರೇ ತಂತಾನೇ ತಮಿಳುನಾಡಿಗೆ 3 ಟಿಎಂಸಿ ನೀರು ಹರಿದು ಹೋಗುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜತೆ ಸಂಘರ್ಷದ ಉದ್ದೇಶವು ಇಲ್ಲ ಹಾಗೂ ಆದೇಶ ಉಲ್ಲಂಘಿಸಬೇಕೆಂಬ ಉದ್ದೇಶವೂ ನಮಗಿಲ್ಲ. ನಾವು ಯಾವತ್ತು ಕೋರ್ಟ್ ಆದೇಶ ಉಲ್ಲಂಘಿಸಿಲ್ಲ. ಎಲ್ಲಾ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಮೇಲೆ ಪ್ರಹಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಸಿಎಂಗಳ ಕಾಲದಲ್ಲೂ ನೀರು ಬಿಡಲಾಗಿದೆ. ಕುಡಿಯುವ ನೀರು ನಮ್ಮ ಮೂಲಭೂತ ಹಕ್ಕು. ನಮ್ಮ ಬಳಿ ಕುಡಿಯಲೂ ಮಾತ್ರ ನೀರಿರುವಾಗ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಸಾಧ್ಯ. ಸಂವಿಧಾನ ಬದ್ಧವಾಗಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನನ್ನ ಪತ್ರವನ್ನೇ ವಾದ ಎಂದು ಓದಿದ್ರೂ......
ಮೊನ್ನೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕರ್ನಾಟಕ ಪರ ವಕೀಲ ನಾರಿಮನ್ ಅವರಿಗೆ ನಾನೇ ಟಿಪ್ಪಣಿ ಬರೆದು ಕೊಟ್ಟಿದ್ದೆ. ನಾನು ಬರೆದು ಕೊಟ್ಟಿದ್ದ ಟಿಪ್ಪಣಿಯೇ ವಾದ ಎಂದು ಹಿರಿಯ ವಕೀಲ ನಾರಿಮನ್ ಓದಿರುವುದನ್ನು ಸಮರ್ಥಿಸಿಕೊಂಡರು.
ನಾರಿಮನ್ ಕೈಬಿಡಲು ಸಿಎಂ ನಕಾರ....
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 18 ರಂದು ಅಂತಿಮ ತೀರ್ಪು ಬರುವುದರಿಂದ ನಾರಿಮನ್ ಅಗತ್ಯ ಇದೆ. ವಾದ ಮಂಡನೆಗೆ ಪೂರಕವಾಗುವಂತೆ ಮತ್ತಷ್ಟು ವಕೀಲರನ್ನು ನೇಮಿಸಲು ಸಿದ್ಧವಿದ್ದೇವೆ ಎಂದು ಕರ್ನಾಟಕ ಪರ ವಕೀಲ ನಾರಿಮನ್ ಅವರನ್ನು ಕೈಬಿಡದಿರಲು ನಿರ್ಧಾರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ