ಕಳೆದ ವರ್ಷವು ಗರ್ಭಿಣಿ ಜಿಬ್ರಾ ಒಂದು ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಆ ಘಟನೆ ಮರೆಯುವ ಮುನ್ನವೇ ಇದೀಗ ಗಂಡು ಜಿಬ್ರಾ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ನಡೆದಿರುವ ಘಟನೆ ಇದಾಗಿದೆ. ಕಳೆದ ವರ್ಷವು ಗರ್ಭಿಣಿ ಜಿಬ್ರಾ ಒಂದು ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಇದೀಗ ಗಂಡು ಜಿಬ್ರಾ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಸ್ರೇಲ್ ದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ ಪ್ರಾಣಿಗಳ ವಿನಿಮಯದ ಒಡಂಬಡಿಕೆಯ ಮೂಲಕ ತರಲಾಗಿದ್ದ ಜಿಬ್ರಾಗಳು ಇವು ಆಗಿದ್ದವು.
ನಾಲ್ಕು ವರ್ಷಗಳ ಹಿಂದೆ ತರಲಾಗಿದ್ದ ಎರಡು ಹೆಣ್ಣು ಹಾಗೂ ಎರಡು ಗಂಡು ಜಿಬ್ರಾಗಳಲ್ಲಿ ಎರಡು ಸಾವನ್ನಪ್ಪಿವೆ. ಜಿಬ್ರಾ ಸಾವಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ ಪಾರ್ಕಿನ ವೈದ್ಯರ ತಂಡ. ಜಿಬ್ರಾ ಸಾವನ್ನಪ್ಪಿದ್ದು ಪ್ರಾಣಿ ಪ್ರೀಯರ ಆಕ್ರೋಶಕ್ಕೆ ಕಾರಣವಾಗಿದೆ.