ದರ ಹೆಚ್ಚಳದ ನಡುವೆಯೂ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಯರ್ ಮಾರಾಟವಂತೂ ಶರವೇಗದಲ್ಲಿ ಮುನ್ನುಗ್ಗುತ್ತಿದೆ. 2020ರಲ್ಲಿ 226.21 ಲಕ್ಷ ಕೇಸ್ ಇದ್ದ ಬಿಯರ್ ಮಾರಾಟ ಈ ವರ್ಷದ ಡಿಸೆಂಬರ್ 19ರವರೆಗೆ 430.25 ಲಕ್ಷ ಕೇಸ್ ಮಾರಾಟವಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಸಾಧ್ಯತೆ ಇದೆ.
2020ರಲ್ಲಿ ಬಿಯರ್ ಮಾರಾಟ 226.21 ಲಕ್ಷ ಕೇಸ್ ಇದ್ದಿದ್ದು, ಮೂರೇ ವರ್ಷಗಳಲ್ಲಿ ದ್ವಿಗುಣವಾಗಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಇನ್ನಿತರ ಮದ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಅಬಕಾರಿ ಇಲಾಖೆಯು ರಾಜಸ್ವಕ್ಕೆ ಹೆಚ್ಚಿನ ಕಾಣಿಕೆ ನೀಡುತ್ತಿದೆ. 2023ರಲ್ಲಂತೂ ಡಿ.29ರವರೆಗಿನ ಅಂಕಿ ಅಂಶಗಳಂತೆ 430.25 ಲಕ್ಷ ಕೇಸ್ ಮಾರಾಟವಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎರಡು ದಿವಸದಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಾಣಲಿದೆ.