90ರ ದಶಕದಲ್ಲಿ ಬೆಂಗಳೂರು ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್`ಗಳು ಅತ್ಯಂತ ಗಮನ ಸೆಲೆಯುತ್ತಿದ್ದವು. ಈ ಬಸ್`ಗಳಿಗೆ ಹತ್ತಿ ಮುಂಬದಿ ಸಿಟ್ ಹಿಡಿದು ನಗರದ ಸೌಂದರ್ಯ ಸವಿಯುವುದಕ್ಕೆ ಜನ ಮುಗಿಬೀಳುತ್ತಿದ್ದರು. ಕಾಲಕ್ರಮೇಣ ನಗರದಿಂದ ಮರೆಯಾಗಿದ್ದ ಈ ಡಬಲ್ ಡೆಕ್ಕರ್ ಬಸ್`ಗಳು ಮತ್ತೆ ನಗರದ ರಸ್ತೆಗಿಳಿಯುವ ಸಾಧ್ಯತೆ ಇದೆ.
ವರ್ಷಾಂತ್ಯದ ವೇಳೆಗೆ ಬಿಎಂಟಿಸಿ ಕೆಂದ್ರದ ನಿಯಮಾವಳಿಗೆ ಅನುಗುಣವಾಗಿ 4ರಿಂದ 5 ಬಸ್ ಖರೀದಿಸಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಈ ಬಸ್ಸುಗಳನ್ನ ಜನ ಸಾಮಾನ್ಯರ ಸಂಚಾರಕ್ಕೆ ನೀಡಲಾಗುತ್ತದೆಯೇ ಅಥವಾ ನಗರ ಪ್ರವಾಸೋದ್ಯಮಕ್ಕೆ ಮೀಸಲಿರಿಸುವರೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
80-90ರ ದಶಕದಲ್ಲಿ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಾಜಿನಗರ, ಜಯನಗರ, ಬಸವನಗುಡಿ ಹೀಗೆ ಪ್ರಮುಖ ಕೇಂದ್ರಗಳ ನಡುವೆ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಬಸ್`ಗಳು ಬಳಿಕ ಕಣ್ಮರೆಯಾಗಿದ್ದವು. 2014ರಲ್ಲಿ ಒಂದೇ ಒಂದು ಬಸ್ಸನ್ನ ನಗರ ಪ್ರವಾಸಕ್ಕೆ ಮೀಸರಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ