Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಬೆನ್ನಲ್ಲೇ ಕುಮಾರಸ್ವಾಮಿ ಗಣಿ ಹಗರಣ ಪ್ರಶ್ನಿಸಿದ ಕಾಂಗ್ರೆಸ್

Congress

Sampriya

ಬೆಂಗಳೂರು , ಶನಿವಾರ, 17 ಆಗಸ್ಟ್ 2024 (14:44 IST)
ಬೆಂಗಳೂರು: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ಹೊರಹಾಕುತ್ತಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ?

ಅವರ ವಿರುದ್ಧ ದೂರು ದಾಖಸಿದ್ದು ಯಾರೋ ಖಾಸಗಿ ವ್ಯಕ್ತಿಯಲ್ಲ, ಸ್ವಾಯುತ್ತ ಸಂಸ್ಥೆಯಾದ ಲೋಕಾಯುಕ್ತ ಎನ್ನುವುದು ನಿಮ್ಮ ಗಮನಕ್ಕಿದೆಯೇ?

ಕಳೆದ 10 ತಿಂಗಳಿಂದ ಈ ಕಡತವನ್ನು ತೆಗೆದು ನೋಡುವ ವ್ಯವದಾನ ನಿಮಗೆ ಇರಲಿಲ್ಲವೇ? ಅಥವಾ ತೆರೆದು ನೋಡಲು ಮೋ-ಶಾ ಅನುಮತಿ ಸಿಗಲಿಲ್ಲವೇ?

550 ಎಕರೆಯ ರಾಜ್ಯದ ಅದಿರು ಸಂಪತ್ತಿಗಿಂತ ಕೆಲವೇ ಕೆಲವು ಚದರ ಅಡಿಯ ನಿವೇಶನಗಳ ವಿಚಾರ ನಿಮಗೆ ಮುಖ್ಯವಾಗಿ ಕಂಡಿದ್ದು ಹೇಗೆ?

ಹಲವು ಬಿಜೆಪಿ ನಾಯಕರ ವಿರುದ್ಧದ ಕಡತಗಳು ನಿಮ್ಮ ಟೇಬಲ್ ಮೇಲೆ ಹಲವು ದಿನಗಳಿಂದ ಕೊಳೆಯುತ್ತಿದ್ದರೂ ಅವುಗಳ ಬಗ್ಗೆ ತಾವು ಗಮನ ಹರಿಸದಿರುವುದು ಏಕೆ?


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ರಕ್ಷಿಸಲು ಸಚಿವರೆಲ್ಲಾ ಒಟ್ಟಾಗಿದ್ದಾರೆ: ಶೋಭಾ ಕರಂದ್ಲಾಜೆ ಒತ್ತಾಯ