ಅಂಡರವಲ್ಡ್ ಡಾನ್ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡೋ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ.
ರಾಜ್ಯದಲ್ಲಿ 50 ಕ್ಕೂ ಹೆಚ್ಚು ಕೇಸ್ ಗಳಲ್ಲಿ ಆರೋಪಿಯಾಗಿರೋ ಭೂಗತ ಪಾತಕಿ ರವಿ ಪೂಜಾರಿ ಇಪ್ಪತ್ತು ವರ್ಷಗಳ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿದ್ದನು.
ಕಳೆದ ವರ್ಷ ಸೆನೆಗಲ್ ನಲ್ಲಿ ಬಂಧನಕ್ಕೆ ಒಳಗಾಗಿದ್ದನು. ಕೇಂದ್ರ ಸರಕಾರವು ಸೆನೆಗಲ್ ಸರಕಾರದೊಂದಿಗೆ ಚರ್ಚೆ ನಡೆಸಿದ್ದು, ರವಿ ಪೂಜಾರಿ ಹಸ್ತಾಂತರದ ಬಗ್ಗೆ ಮಹತ್ವದ ನಿರ್ಣಯಕ್ಕೆ ಬಂದಿವೆ.
ಕರ್ನಾಟಕದ ಅಧಿಕಾರಿಗಳ ತಂಡವು ಸೆನೆಗಲ್ ಗೆ ತೆರಳಿದ್ದು, ರವಿ ಪೂಜಾರಿಯನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.