ಆ ಯುವಕರು ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಡಾಕ್ಟರ್ ಬರೆದು ಕೊಟ್ಟಿರೋ ಆರೋಪ ಕೇಳಿಬಂದಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ.
ಹೊಟ್ಟೆ ನೋವು ಚೆಕಪ್ ಮಾಡಿಸಿಕೊಳ್ಳಲು ಬಂದವರಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಡಾಕ್ಟರ್ ಸೂಚಿಸಿದ್ದಾರೆ. ಹೆಚ್.ಐ.ವಿ., ಸಿಬಿಸಿ ಸೇರಿದಂತೆ ಹಲವು ಚೆಕ್ ಅಪ್ ಗಳ ಜೊತೆಗೆ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಬೇಕು ಅಂತ ವೈದ್ಯರು ಚೀಟಿ ಬರೆದುಕೊಟ್ಟಿದ್ದು, ಈಗ ಚರ್ಚೆಗೆ ಕಾರಣವಾಗುತ್ತಿದೆ.
ಜಾರ್ಖಂಡ್ ನ ಸಿಮಾರಿಯಾದ ರೆಫರಲ್ ಸರಕಾರಿ ಆಸ್ಪತ್ರೆ ವೈದ್ಯ ಮುಖೇಶ್ ಇಂಥ ಎಡವಟ್ಟು ಮಾಡಿದ್ದಾರೆ ಅಂತ ದೂರಲಾಗಿದೆ.
ಗೋಪಾಲ್, ಕಾಮೇಶ್ವರ್ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದರೆ ವೈದ್ಯರು ನಿರ್ಲಕ್ಷ್ಯದಿಂದ ಪ್ರೆಗ್ನೆನ್ಸಿ ಟೆಸ್ಟ್ ಗೆ ಸಲಹೆ ನೀಡಿರೋದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.