ತಾಲೂಕು ಆಡಳಿತ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ನಿರ್ಧರಿಸಿದ್ದ ಸ್ಥಳ ಏಕಾಏಕಿಯಾಗಿ ಬದಲಾವಣೆಗೊಂಡಿತ್ತು. ಪೊಲೀಸರು ನಡುವೆ ಪ್ರವೇಶಿಸಿದ್ದರಿಂದ ಹೈಡ್ರಾಮಕ್ಕೆ ತೆರೆಬಿದ್ದ ಘಟನೆ ನಡೆದಿದೆ.
ಕೋಲಾರದ ಬಂಗಾರಪೇಟೆ ತಾಲೂಕು ಆಡಳಿತ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ಹೈ ಡ್ರಾಮಾ ನಡೆದ ಘಟನೆ ವರದಿಯಾಗಿದೆ.
ಬಂಗಾರಪೇಟೆ ತಾಲೂಕು ಕಛೇರಿ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯನ್ನು ಬಂಗಾರಪೇಟೆ ಪೊಲೀಸರು ಪೆಂಡಾಲ್ ತೆರವು ಮಾಡಿದರು.
ಈ ಮೊದಲು ನಿಗದಿ ಮಾಡಿದಂತೆ ತಾಲೂಕು ಕಛೇರಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಲು ನಿರ್ಧಾರ ಮಾಡಲಾಯಿತು.
ಶುಕ್ರವಾರ ಮುಸ್ಲಿಂ ಮುಖಂಡರು ಹಾಗು ಪೊಲೀಸರು ನಿಗದಿ ಮಾಡಿದ್ದ ಕಾರ್ಯಕ್ರಮ ಸ್ಥಳವೇ ಬೇರೆ ಆಗಿತ್ತು. ಆದರೆ
ಶನಿವಾರ ಧಿಡೀರ್ ವೇದಿಕೆ ಕಾರ್ಯಕ್ರಮಕ್ಕಾಗಿ ಪಟ್ಟು ಹಿಡಿದಿದ್ದ ಮುಸ್ಲಿಂ ಮುಖಂಡರ ನಡೆಯಿಂದ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ವೇದಿಕೆ ಹಾಕಿಸಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಿದ್ದರು ತಹಶೀಲ್ದಾರ್ ಚಂದ್ರಮೌಳೀಶ್ವರ್. ಆದರೆ ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಮೊದಲು ನಿರ್ಧಾರ ಮಾಡಿದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ತಾಲೂಕು ಆಡಳಿತ ನಿರ್ಧಾರ ಮಾಡಿತು.