ದೆಹಲಿಗೆ ಹೋಗಿ ಬಂದ 5 ತಬ್ಲಿಘಿಗಳ ಕೊರೊನಾ ವೈರಸ್ ಟೆಸ್ಟ್ ವರದಿ ಬಂದಿದೆ. ಇನ್ನೂ 9 ಜನರ ವರದಿ ಬರಬೇಕಿದೆ.
ಯಾದಗಿರಿ ಜಿಲ್ಲೆಯಲ್ಲಿ ತಬ್ಲಿಘಿ ಪ್ರಕರಣದ ಐವರು ಸೇರಿದಂತೆ ಇದುವರೆಗೂ 42 ಜನರ ಗಂಟಲು ಮಾದರಿ ಪ್ರಯೋಗಾಲಯ ವರದಿ ನೆಗಟಿವ್ ಎಂದು ಬಂದಿದೆ. ಹೊಸದಾಗಿ 9 ಜನರ ಗಂಟಲು ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ವಿದೇಶದಿಂದ ಬಂದ 71 ಜನರನ್ನು ಹೋಮ್‍ಕ್ವಾರಂಟೈನ್ ಮಾಡಲಾಗಿದ್ದು, ಇವರಲ್ಲಿ 46 ಜನರು 28 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಖಚಿತ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿರುವುದಿಲ್ಲ. ವೈರಸ್ ತಡೆಗೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡಬಾರದು ಅವರು ಮನವಿ ಮಾಡಿದ್ದಾರೆ.