ಚಿತ್ರದುರ್ಗ : ಕೊಟ್ಟ ಹಣ ವಾಪಾಸು ಕೇಳಿದ್ದಕ್ಕೆ ಮಹಿಳೆಯ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯ ಅತ್ಯಾಚಾರ ಎಸಗಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮಹಿಳೆಯ ಬಳಿ 8 ಲಕ್ಷ ರೂ ಸಾಲ ಪಡೆದಿದ್ದ ಜಿಲ್ಲಾ ಪಂಚಾಯಿತಿ ಸದಸ್ಯನೊಬ್ಬ ಅದನ್ನು ಆಕೆ ವಾಪಾಸು ಕೇಳಿದ್ದಕ್ಕೆ ಹಣ ಕೊಡುವುದಾಗಿ ಶನಿವಾರ ರಾತ್ರಿ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಮಹಿಳೆ ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.