ಬೆಳಗಾವಿ : ತನ್ನ ಪತ್ನಿಯ ಜೊತೆ ಸಲುಗೆಯಿಂದ ವರ್ತಿಸಿದ್ದಕ್ಕೆ ಪ್ರಶ್ನಿಸಿದ ಪತಿಗೆ ಯುವಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ವಡಗಾವಿಯಲ್ಲಿ ನಡೆದಿದೆ.
ಕಿಶೋರ್ ಹಸಣೆ ಹಲ್ಲೆಗೊಳಗಾದ ಪತಿ, ಅಭಿಷೇಕ್ ಅವಂದಕರ್ ಹಲ್ಲೆ ನಡೆಸಿದ ಯುವಕ. ಕಿಶೋರ್ ಹಸಣೆ ಪತ್ನಿಯ ಜೊತೆ ಅಭಿಷೇಕ್ ಸಲುಗೆಯಿಂದ ವರ್ತಿಸಿದ್ದಾನೆ. ಈ ಬಗ್ಗೆ ಕಿಶೋರ್ ಅಭಿಷೇಕ್ ನನ್ನು ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಅಭಿಷೇಕ್ ಮಾರಕಾಸ್ತ್ರಗಳಿಂದ ಕಿಶೋರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಷೇಕ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.