ಹುಬ್ಬಳ್ಳಿ : ಹುಬ್ಬಳ್ಳಿಯ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಸ್ನೇಹಿತರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಅಸಲಿ ಕಾರಣ ಏನೆಂಬುದು ತಿಳಿದುಬಂದಿದೆ.
7 ಮಂದಿ ಸ್ನೇಹಿತರು ಕೆರೆಗೆ ಇಳಿದ ಹಿನ್ನಲೆಯಲ್ಲಿ ಈಜುಬಾರದೇ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮೃತದೇಹವನ್ನು ಹೊರಗೆಯಲಾಗಿದೆ.
ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಳಿದ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಮೃತರಲ್ಲಿ ಒಬ್ಬ ಪಬ್ ಜಿ ಗೇಮ್ ಆಡುತ್ತಾ ನೀರಿಗೆ ಬಿದ್ದಿದ್ದು, ಅವನನ್ನು ಕಾಪಾಡಲು ಹೋಗಿ ಮೂವರು ಕೂಡ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.