ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ಯದ ರೈತರ ಧರಣಿ 5 ನೇ ದಿನಕ್ಕೆ ಕಾಲಿಟ್ಟಿದೆ.
ಸತತ ಐದನೇ ದಿನಕ್ಕೆ ಮುಂದುವರೆದಿದೆ ರೈತರ ಪ್ರತಿಭಟನೆ. ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದೆ.
ಕಳೆದ ಐದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಪಾಲ್ಗೊಂಡಿದ್ದಾರೆ. ಬೆಳಗಾವಿಯಲ್ಲಿ ಇಂದು ಈ ಕುರಿತು ಸಭೆ ನಡೆಸುತ್ತಿದ್ದಾರೆ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ.
ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕೃಷ್ಣಾ ನದಿಗೆ ನೀರು ಹರಿಸುವ ಕುರಿತು ಸಭೆ ನಡೆಯುತ್ತಿದೆ. ಬೆಳಗಾವಿಗೆ ಸಚಿವ ಡಿ. ಕೆ. ಶಿವಕುಮಾರ ಭೇಟಿ ನೀಡಿ ಸಭೆ ನಡೆಸ್ತಿರೋ ಹಿನ್ನೆಲೆಯಲ್ಲಿ ಸಿಹಿ ಸುದ್ದಿಗೆ ಕಾಯುತ್ತಿದ್ದಾರೆ ಕೃಷ್ಣಾ ತೀರದ ರೈತರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಮುಂದುವರಿದಿದೆ ರೈತರ ಪ್ರತಿಭಟನೆ.