ಕಲಬುರಗಿ : ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹೇಳಿಕೆ ಯತೀಂದ್ರ ಸಿದ್ದರಾಮಯ್ಯನವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.ಯತೀಂದ್ರ ಅವರ ಹೇಳಿಕೆ ಪಕ್ಷದ ಹೇಳಿಕೆಯಾಗಲೀ, ಪಕ್ಷದ ಅಭಿಪ್ರಾಯವಾಗಲೀ ಅಲ್ಲ. ಪಕ್ಷದ ನಿರ್ಧಾರವನ್ನು ಹೈಕಮ್ಯಾಂಡ್ ನಲ್ಲಿರುವ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದರೆ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಅವರಿಗೆ ಎರಡೂವರೆ ವರ್ಷ ಅವಧಿ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ಕೆರಳಿದ ಸವದಿ, ಅದು ಅವರಿಬ್ಬರ ನಡುವೆ ಪಾಲಾಗಿದೆ ಎಂದು ನಿಮ್ಮ ಮಧ್ಯಸ್ಥಿಕೆಯಲ್ಲಿಯೇನಾದರೂ ಚರ್ಚೆ ನಡೆದಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಪಕ್ಷದ ಹೈಕಮ್ಯಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರಬೇಕಾಗುತ್ತದೆ. ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರೆಯಬಹುದು. ಅದಕ್ಕೆ ಮುಂದಿನ ಐದು ವರ್ಷಕ್ಕೂ ಸಿದ್ದರಾಮಯ್ಯನವರನ್ನೇ ಸಿಎ ಆಗಿ ಘೋಷಿಸಬಹುದು ಎಲ್ಲವೂ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಸವದಿ ಹೇಳಿದ್ದಾರೆ.