ಪರಿಸರಕ್ಕೆ ನಾವು ಅಡ್ಜಸ್ಟ್ ಆಗಿಲ್ಲ, ಪರಿಸರವೇ ನಮಗೆ ಅಡ್ಜಸ್ಟ್ ಆಗಿದೆ ಎಂದು ಪರಿಸರ ದಿನದ ಕುರಿತು DCM ಡಿ.ಕೆ.ಶಿವಕುಮಾರ್ ಹೇಳಿದ್ರು.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೇ ವೇಳೆ BBMP ಅರಣ್ಯ ಇಲಾಖೆ IFS ಅಧಿಕಾರಿ ಸರಿನಾ ಸಿಕ್ಕಲಿಗಾರ್ ಮೇಲೆ ಡಿ.ಕೆ.ಶಿವಕುಮಾರ್ ಗರಂ ಆದ್ರು.ನಿಮ್ಮ ಕೆಲಸ ಸರಿಯಿಲ್ಲ, ಬದಲಾಯಿಸಿಕೊಳ್ಳಿ. ಇಂದು ನನ್ನ ಕೈಯಲ್ಲಿ ಗಿಡ ನೆಡಿಸಿದ ರೀತಿ ಸಂಪೂರ್ಣ ಅವೈಜ್ಞಾನಿಕವಾದದ್ದು. ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟವಿಲ್ಲ. ನಾವು ಮಾಡುವ ಕೆಲಸ ಶಾಶ್ವತವಾಗಿ ಇರಬೇಕೇ ಹೊರತು ತೋರಿಕೆಗೆ ಇರಬಾರದು. ಮರ ಇರುವ ಕಡೆ ಗಿಡ ನೆಡಿಸುವುದಲ್ಲ, ಮರ ಇಲ್ಲದ ಕಡೆ ಗಿಡ ನೆಡಿಸಬೇಕು. ಎಷ್ಟು ಅಂತರಕ್ಕೆ ಗಿಡ ಹಾಕಬೇಕು, ಯಾವ ಗಿಡ ಹಾಕಬೇಕು ಅನ್ನೋದು ಗೊತ್ತಿರಬೇಕು. ನಾನು ನನ್ನ ಊರಿನಲ್ಲಿ ಗಿಡಗಳನ್ನ ಬೆಳಸಿದ್ದೀನಿ, ಹೇಗೆ ಬೆಳಸಬೇಕು ಅನ್ನೋದು ನನಗೆ ಗೊತ್ತಿದೆ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.