ದೀಪಾವಳಿ ಹಬ್ಬದಲ್ಲಿ ಹಣತೆ ಹಚ್ಚಿ ಸಿಹಿ ಊಟ ಮಾಡಿ ಪಟಾಕಿ ಸಿಡಿಸೋದು ವಾಡಿಕೆ. ಆದರೆ ದನಗಳನ್ನು ಸಿಂಗರಿಸಿ ಮುಳ್ಳಿನ ರಾಶಿ ಮೇಲೆ, ಬೆಂಕಿ ಮುಂದೆ ಹಾಯಿಸುವ ಪರಂಪರೆ ಈಗಲೂ ಜೀವಂತವಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಳ್ಳಿಯ ಯಾದವ ಸಮಾಜದಲ್ಲಿ ವಿಶೇಷ ಆಚರಣೆ ನಡೆದುಕೊಂಡು ಬಂದಿದೆ.
ತಮ್ಮ ಪಾಲಿನ ದೇವರಾದ ದನಗಳನ್ನು ಸಿಂಗರಿಸಿ ಅವುಗಳನ್ನು ಮುಳ್ಳಿನ ರಾಶಿಯ ಬೆಂಕಿಯ ಮುಂದೆ ಹಾಯಿಸಲಾಗುತ್ತದೆ.
ಗೋವುಗಳನ್ನು ವಿಶೇಷವಾಗಿ ಸಿಂಗರಿಸಿ ಕಾಟಲಿಂಗ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತ್ರ ರಾತ್ರಿ ಬೆಂಕಿ ಹಾಯಿಸುವ ದೇವರ ಕಾರ್ಯವನ್ನು ಮಾಡಲಾಗುತ್ತದೆ.
ಯಾದವ ಸಮಾಜದ ಬುಡಕಟ್ಟು ಆಚರಣೆಗಳಲ್ಲಿ ಇದು ಕೂಡಾ ಒಂದಾಗಿದೆ. ಸಿಂಗರಿಸಿದ ದನಗಳನ್ನು ಬೆಂಕಿಯ ಮುಂದೆ ಹಾಯಿಸಲಾಗುತ್ತದೆ.