ಲಾಕ್ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಆಘಾತ ನೀಡಿದ ಮಹಾರಾಷ್ಟ್ರ ನಂಜು ಈಗ ಬರಪೀಡಿತ ಜಿಲ್ಲೆಗೆ ತಟ್ಟಿದ್ದು, ಒಂದೇ ದಿನ ಒಂದೇ ಜಿಲ್ಲೆಯಲ್ಲಿ 45 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲೆಗೂ ಮಹಾರಾಷ್ಟ್ರದ ನಂಜು ಬಲವಾಗಿ ತಟ್ಟಿದೆ. ಒಂದೇ ದಿನ 45 ಮಂದಿ ಕೋವಿಡ್-19 ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕು ನಾಗಲೋಟದಲ್ಲಿ ಸಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 71 ಕ್ಕೆ ಏರಿಕೆ ಕಂಡಿದೆ.
ಮುಂಬೈ ನಂಜು ಎಲ್ಲಿಗೆ ಹೋಗಿ ಮುಟ್ಟುತ್ತದೆಯೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಸಡಿಲಿಕೆ ಬಳಿಕ ನೆರೆಯ ಮಹಾರಾಷ್ಟ್ರದಿಂದ ಬರೋಬ್ಬರಿ 265 ಮಂದಿ ನಾಗರಿಕರು ಆಗಮಿಸಿದ್ದಾರೆ. ಇವರ ಪೈಕಿ 45 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.