ಗಡಿಜಿಲ್ಲೆ ಬೆಳಗಾವಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಪುಂಡರಿಗೆ ಜಿಲ್ಲಾಡಳಿತ ತಕ್ಕ ಪಾಠ ಕಲಿಸಿದೆ.
ನಿನ್ನೆಯಷ್ಟೇ ಬೆಳಗಾವಿ ನಗರದ ಕಪಿಲೇಶ್ವರ್ ಮಂದಿರದ ಬಳಿ ಉದ್ಘಾಟನೆಯಾಗಿರುವ ರೈಲ್ವೆ ಮೇಲ್ಸೆತುವೆಯ ಮೇಲೆ ಎಂಇಎಸ್ ಪುಂಡರು ಛತ್ರಪತಿ ಶಿವಾಜಿ ಮಹಾರಾಜ ರಸ್ತೆ ಬೆಳಗಾಂವ್ ಎಂದು ಮರಾಠಿ ಭಾಷೆಯಲ್ಲಿ ನಾಮ ಫಲಕ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ವಿವಾದಿತ ನಾಮಫಲಕವನ್ನು ತೆರವುಗೊಳಿಸಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಮೇಲ್ಸೆತುವೆಯ ಉದ್ಘಾಟನೆ ಬಳಿಕ ಬೆಳಗಾವಿ ಜನತೆ ಇದನ್ನು ಕಪಿಲೇಶ್ವರ್ ರೈಲ್ವೆ ಓವರ್ ಬ್ರಿಜ್ಡ್ ಎಂದು ಕರೆಯುತ್ತಿದ್ದಾರೆ. ಆದರೆ, ಎಂಇಎಸ್ ಪುಂಡರು ಇದನ್ನು ಛತ್ರಪತಿ ಶಿವಾಜಿ ಮಹಾರಾಜ ರಸ್ತೆ ಎಂದು ಹೆಸರಿಸುವ ಮೂಲಕ ಮತ್ತೆ ಕ್ಯಾತೆ ತೆಗೆದಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ವಿವಾದಿತ ನಾಮಫಲಕವನ್ನು ತೆರವುಗೊಳಿಸಿದ್ದು, ನಾಮಫಲಕ ತೆರವಾದ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಿಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ