ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದರಿಂದ ರಾಜ್ಯದಲ್ಲಿ ಕೂಡ ಬಿಜೆಪಿ ಗೆಲುವಿನ ಹುಮ್ಮಸ್ಸಿನಿಂದಿರುವಾಗಲೇ ಮತ್ತೆ ಭಿನ್ನಮತ ಕಾಣಿಸಿಕೊಂಡಿದೆ.
ಗದಗ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿಯ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅಕ್ಕಪಕ್ಕದಲ್ಲೇ ಕುಳಿತರೂ ಒಬ್ಬರ ಮುಖ ಒಬ್ಬರು ನೋಡದೆ ಇರುವುದು ಇಬ್ಬರ ನಡುವೆ ವೈಮನಸ್ಸು ಇರುವುದನ್ನು ತೋರಿಸಿಕೊಟ್ಟಿದೆ.
ಒಂದು ತಾಸಿಗೂ ಅಧಿಕ ಸಮಯ ವೇದಿಕೆಯಲ್ಲಿದ್ದರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡಿಲ್ಲ. ಇದರಿಂದ ಪಕ್ಷದ ಸಂಘಟನೆಗೆ ತೊಡಕಾಗಲಿದೆ ಎನ್ನುವ ಚರ್ಚೆ ಆರಂಭವಾಗಿದೆ.
ಅಷ್ಟು ಮಾತ್ರವಲ್ಲದೇ ಯಡಿಯೂರಪ್ಪ ಭಾಷಣದಲ್ಲಿ ಮಲೆಶಿಯಾದಿಂದ ಮರಳು ತರುವ ದಂಧೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಶೆಟ್ಟರ್ ವಿರುದ್ಧ ಕೋಪ ಪ್ರದರ್ಶಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.