ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಬಯಲಿಗೆಳೆದಿದ್ದ ಡಿಐಜಿ ರೂಪಾರನ್ನು ಸರಕಾರ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಡಿ.ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಐಜಿಪಿಯಾಗಿ ವರ್ಗಾವಣೆಗೊಳಿಸಿ ಸರಕಾರ ಎತ್ತಂಗಡಿ ಮಾಡಿದೆ.
ಕಾರಾಗೃಹದ ಡಿಜಿಯಾಗಿದ್ದ ಸತ್ಯನಾರಾಯಣ್ ರಾವ್ ಅವರನ್ನು ಕೂಡಾ ಸರಕಾರ ವರ್ಗಾವಣೆಗೊಳಿಸಿದೆ. ಆದರೆ, ಸ್ಥಳ ನೀಡದೆ ವರ್ಗಾವಣೆ ಮಾಡಿದ್ದರಿಂದ ತ್ರಿಶಂಕು ಸ್ಥಿತಿಗೆ ಕಾರಣವಾಗಿದೆ.
ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾ, ಜೈಲಿನ ಅಧಿಕಾರಿಗಳಿಗೆ ಎರಡು ಕೋಟಿ ರೂಪಾಯಿ ಲಂಚ ನೀಡಿ ಐಷಾರಾಮಿ ಆತಿಥ್ಯ ಪಡೆದಿದ್ದಾರೆ ಎಂದು ಡಿಐಜಿ ರೂಪಾ, ತಮ್ಮ ವರದಿಯಲ್ಲಿ ದಾಖಲಿಸಿದ್ದರು.
ಜೈಲಿನ ಅವ್ಯವಹಾರದ ವರದಿ ಸಲ್ಲಿಕೆಯಿಂದಾಗಿ ಡಿಜಿ ಸತ್ಯನಾರಾಯಣ್ ರಾವ್ ಮತ್ತು ಡಿಐಜಿ ರೂಪಾ ಮಧ್ಯೆ ತೀವ್ರ ಬಿಕ್ಕಟ್ಟು ಎದುರಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.