ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಮೇಲೆ ಮುನಿಸಿಕೊಂಡು ಬಿಜೆಪಿ ಸೇರಿಕೊಂಡ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಗೆ ಇಂದೂ ಹಳೆಯ ಪಕ್ಷದ ಮೇಲಿನ ನಂಟು ಬಿಡಲು ಕಷ್ಟವಂತೆ.
ಕಾಂಗ್ರೆಸ್ ನಲ್ಲಿ ಸುಮಾರು 46 ವರ್ಷವಿದ್ದೆ. ಅಷ್ಟು ಬೇಗ ಆ ಪಕ್ಷದ ನಂಟು ಬಿಡಲು ಸಾಧ್ಯವಾಗಲ್ಲ. ಅಷ್ಟು ಬೇಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷವನ್ನು ನನ್ನ ಪಕ್ಷವೆಂದು ಒಪ್ಪಿಕೊಳ್ಳಲು ಕಷ್ಟ ಎಂದು ಕೃಷ್ಣ ಹೇಳಿದ್ದಾರೆ.
ಹಾಗಿದ್ದರೂ, ಬಿಜೆಪಿಯಲ್ಲಿ ತಮಗೆ ದೊರೆತ ಅಭೂತಪೂರ್ವ ಸ್ವಾಗತದಿಂದ ಖುಷಿಯಾಗಿದ್ದಾರೆ. ಇದು ಇನ್ನು ಮುಂದೆ, ನಮ್ಮ ಪಕ್ಷ ಎಂದಿದ್ದಾರೆ. ಅಲ್ಲದೆ, ಬಿಜೆಪಿಯಲ್ಲಿರುವ ಶಿಸ್ತು ತುಂಬಾ ಇಷ್ಟವಾಯಿತು ಎಂದಿದ್ದಾರೆ.
ಇದೇ ವೇಳೆ ತನಗಿಂತ ಕಿರಿಯ ಅಮಿತ್ ಶಾ ಮುಂದೆ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಕೃಷ್ಣರದ್ದು ಎಂದು ಟೀಕಿಸಿದ್ದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಅವರು, ಮೊದಲು ಅವರು ತಮ್ಮ ಬೆನ್ನು ನೋಡಿಕೊಳ್ಳಿ. ತಮ್ಮ ನಾಯಕನ ವಯಸ್ಸು ಎಷ್ಟೆಂದು ನೋಡಿಕೊಳ್ಳಲಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ