ಕನಕಪುರ ಬಂಡೆಯಷ್ಟು ಗಟ್ಟಿಯಿದ್ದ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಅವರನ್ನ ಮತ್ತೆ ತಿಹಾರ್ ಜೈಲಲ್ಲೇ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿದೆ.
ಜಾರಿ ನಿರ್ದೇಶನಾಲಯದಿಂದ ಸೆಪ್ಟಂಬರ್ 3 ರಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸ್ಪೇಷಲ್ ಕೋರ್ಟ್ ನ್ಯಾಯಾಧೀಶ ಅಜಯಕುಮಾರ ಕುಹಾರ್ ಆದೇಶ ಪ್ರಕಟಮಾಡಿದ್ದಾರೆ.
ಕೋರ್ಟ್ ಡಿಕೆಶಿ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ಬೆನ್ನಲ್ಲೇ ತಿಹಾರ್ ಜೈಲಿನಲ್ಲೇ ಡಿಕೆಶಿ ಇರಬೇಕಾಗಿದೆ.