Webdunia - Bharat's app for daily news and videos

Install App

ನಡೆದಾಡುವ ದೇವರ ಮೇಲಿನ ಭಕ್ತಿ: ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು!

Webdunia
ಬುಧವಾರ, 23 ಜನವರಿ 2019 (19:13 IST)
ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ಆ ಊರಿನ ಜನರು ತಮ್ಮ ಗ್ರಾಮದ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೂ ಡಾ. ಶಿವಕುಮಾರ ಸ್ವಾಮೀಜಿಗೂ ಅವಿನಾಭಾವ ನಂಟು. ಅವರು ಹಲವು ಬಾರಿ ತಾಲೂಕಿಗೆ ಭೇಟಿ ನೀಡಿದ್ದಲ್ಲದೇ ಜಿಲ್ಲೆಯಲ್ಲಿ ಅಪಾರ ಭಕ್ತಗಣ ಹೊಂದಿದ್ದಾರೆ.

ತಾಲೂಕಿನ ಕಾಡಂಚಿನ ಗ್ರಾಮವಾದ ಕುರುಬರಹುಂಡಿ ಗ್ರಾಮಸ್ಥರು ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ತಮ್ಮ ಗ್ರಾಮದ ಹೆಸರನ್ನೇ 2008ರಲ್ಲಿ ಬದಲಿಸಲಾಗಿತ್ತು. ಅಂದು ಕುರುಬರಹುಂಡಿ ಎಂದಿದ್ದ ಗ್ರಾಮ 11 ವರ್ಷಗಳಿಂದ ಶಿವಕುಮಾರಪುರ ಎಂದು ಬದಲಾಗಿದೆ. 

ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಪ್ರಭಾವಕ್ಕೆ ಒಳಗಾಗಿ ತಾಲೂಕಿನ ಕಾಡಂಚಿನ ಕುರುಬರಹುಂಡಿ ಜನ ಊರಿನ ಹೆಸರನ್ನೇ ಬದಲಿಸಿದ್ದು ಅವರ ಮೇಲಿನ ಗೌರವಕ್ಕೆ ಸಾಕ್ಷಿಯಾಗಿದೆ. 

800-1000 ಜನಸಂಖ್ಯೆ ಇರುವ ಕುರುಬರಹುಂಡಿಯಲ್ಲಿ ವಿವಿಧ ಕೋಮಿನವರು ಸೌಹಾರ್ಧಯುತವಾಗಿ ಜೀವಿಸುತ್ತಿದ್ದಾರೆ. 2008 ರಲ್ಲಿ ಗ್ರಾಮಸ್ಥರು ತಮ್ಮ ಊರಿನ ಹೆಸರು ಬದಲಿಸುವ ನಿರ್ಣಯ ಕೈಗೊಂಡು ಅದರಂತೆ ಶಿವಕುಮಾರಪುರ ಎಂದು ಮರುನಾಮಕರಣ ಮಾಡಿದ್ದರು.

ನಾಮಫಲಕದಲ್ಲಿ ಶಿವಕುಮಾರಪುರ ಎಂದು ಬರೆಸುವ ಜೊತೆಗೆ ಸಿದ್ಧಗಂಗಾಶ್ರೀಗಳ ಫೋಟೋವನ್ನು ಹಾಕಿ ನಡೆದಾಡುವ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.

ಇನ್ನು ಗ್ರಾಮದ ಮರುನಾಮಕರಣದ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಕಿರಿಯಶ್ರೀ, ಅಂದಿನ ಶಾಸಕ ಹೆಚ್.ಎಸ್. ಮಹದೇವಪ್ರಸಾದ್ ಭಾಗವಹಿಸಿದ್ದರು.

 ಹಲವು ಬಾರಿ ಭೇಟಿ : 

ತಾಲೂಕಿಗೆ ಹಲವಾರು ಬಾರಿ ಭೇಟಿ ನೀಡಿದ್ದ ಸಿದ್ಧಗಂಗಾಶ್ರೀ ಹೆಚ್.ಎಸ್. ಮಹದೇವಪ್ರಸಾದ್ ಕುಟುಂಬ ಶ್ರೀಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಹಾಲಹಳ್ಳಿಯಲ್ಲಿ ಹೆಚ್.ಎನ್. ಶ್ರೀಕಂಠಶೆಟ್ಟಿ ನಿಧನ ಬಳಿಕ ಶೆಟ್ಟರ ಪ್ರತಿಮೆ ಅನಾವರಣ ಮಾಡಿದ್ದರು. ಶ್ರೀಗಳು ಹಂಗಳ, ದೇವರಹಳ್ಳಿ, ಬೇಗೂರಿಗೆ ಪಾದಪೂಜೆಗೆ ಬಂದಿದ್ದು ಈಗ ನೆನಪು ಮಾತ್ರ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments