ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ, ಸತ್ಯಮೂರ್ತಿ ಜ್ಞಾನವೇಲು, ಕುಮಾರೇಶನ್ ಸೇಲ್ವರಾಜ್, ಕೆ ಬಾರದಿರಾಜ್ ಕೇಶವನ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 1 ಲಕ್ಷ 50 ಸಾವಿರ ಮೌಲ್ಯದ ಒಂದು ಲ್ಯಾಪ್ಟಾಪ್ 1 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ, ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಜೂ. 3 ರಂದು ಕೊಪ್ಪಿಕರ್ ರಸ್ತೆಯ ಸೆಟಲೈಟ್ ಬಿಲ್ಡಿಂಗ್ ಎದುರಿನ ಕಾರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸಾಜೀದ್ ಫರಾಶ್ ಎನ್ನುವರ ಕಾರಿನಲ್ಲಿನ 45 ಸಾವಿರ ಮೌಲ್ಯದ ಆಪಲ್ ಕಂಪನಿಯ ಲ್ಯಾಪಟಾಪ್ ಹಾಗೂ ಕಾಗದ ಪತ್ರಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಹಿಂದೆ ಬಿದಿದ್ದ ಪೊಲೀಸರು.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಓಡಿ ಹೋಗುವಾಗ ಕಳ್ಳನನ್ನು ಬೆನ್ನಹತ್ತಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಹರ ಪೊಲೀಸ ಇನ್ಸ್‌ಪೆಕ್ಟರ್ ಭರತ ಎಸ್ .ಆರ್. ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ ಸಿಬ್ಬಂದಿಗಳಾದ ಸದಾನಂದ ಕಲಘಟಗಿ, ಮಂಜು ಹಾಲವರ, ಶ್ರೀನಿವಾಸ ಯರಗುಪ್ಪಿ, ಚಂದ್ರಶೇಖರ್ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.