ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯಲ್ಲಿ ಚರ್ಮದ ದಾನಿಗಳು ಯಿಲ್ಲದೆ ಚರ್ಮದ ಕೋರತೆ ಉಂಟಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕೀನ್ ಬ್ಯಾಂಕ್ ಯಿದ್ದು ಆ ಮೂಲಕ ರಾಜ್ಯದ ಹಲವು ಆಸ್ಪತ್ರೆಗಳಿಗೆ ಸ್ಕೀನ್ ದೊರಕಿಸಲಾಗುತ್ತಿದೆ.ಇನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿನನಿತ್ಯ ಹಲವು ರೋಗಿಗಳು ಸುಟ್ಟ ಪ್ರಕರಣಗಳು ಆ್ಯಸಿಡ್ ಗೆ ಒಳಗಾಗಿರು ರೋಗಿಗಳು. ಹೀಗೆ ಚರ್ಮ ಸಂಭದಿಸಿದ ಪ್ರಕರಣಗಳು ದಿನನಿತ್ಯ ಬರುತ್ತವೆ ಆ ರೋಗಿಗಳು ಗುಣ ಆಗಬೇಕಾದ್ರೆ ಅವರಿಗೆ ಚರ್ಮ ಬೇಕೆ ಬೇಕು ಹಾಗಾಗಿ ಚರ್ಮದ ಅಗತ್ಯತೆ ತುಂಬಾಯಿದೆ. ಆದ್ರೆ ಚರ್ಮ ನಿಡುವ ದಾನಿಗಳು ಸಂಖ್ಯೆ ತೀವ್ರ ಕಡಿಮೆ ಆಗಿದೆ . ಕಳೆದ 3 ವರ್ಷದಿಂದ 34 ಮಂದಿ ಮಾತ್ರ ಚರ್ಮ ದಾನ ಮಾಡಿದ್ದಾರೆ. 234 ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಚರ್ಮದ ಅಗತ್ಯವಿತ್ತು ಅವರಲ್ಲಿ 145 ಮಂದಿಗೆ ಮಾತ್ರ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಇನ್ನೂ ದಾನಿಗಾಳಿಗಾಗಿಯೇ ಸಹಾಯ ವಾಣಿ 080-26703633 ಕರೆ ಮಾಡಿ ತಿಳಿಸಿದ್ರೆ ಸ್ಕಿನ್ ಬ್ಯಾಂಕ್ ತಂಡ ಬರುತ್ತೆ ಎಂದು ಸ್ಕಿನ್ ಬ್ಯಾಂಕ್ ತಿಳಿಸಿದೆ ಈ ಬಗ್ಗೆ ಮಾತನಾಡಿದ ಪ್ಲಾಸ್ಟೀಕ್ ಸರ್ಜರಿ ವೀಭಾದ ಮುಖ್ಯಸ್ಥರಾದ ಡಾ. ರಮೇಶ್ ಕಳೆದ ಕಳೆದ 2 ವರ್ಷದಿಂದ ಕೋವಿಡ್ ನಿಂದ ಚರ್ಮ ದಾನಿಗಳು ಕಡಿಮೆ ಆಗಿದ್ದಾರೆ ಕೋವಿಡ್ ಗಿಂತ ಮೊದಲು ಚರ್ಮ ದಾನಿಗಳು ಹೆಚ್ಚು ಇದ್ರು. ಅವಾಗ ಸ್ಕೀನ್ ಬ್ಯಾಂಕ್ ಅಲ್ಲಿ ಚರ್ಮದ ಕೊರತೆ ಇರಲಿಲ್ಲ ಆದ್ರೆ ಇದೀಗ ಚರ್ಮ ನೀಡುವ ದಾನಿಗಳು ಕಡಿಮೆ ಆಗಿದ್ದಾರೆ .ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತು ಜಿಲ್ಲೆಗಳಿಂದಲೂ ಚರ್ಮದ ಬೇಡಿಕೆ ಹೆಚ್ಚು ಇದೆ ಆದ್ರೆ ನಮ್ಮಲ್ಲಿ ಅಸ್ಟು ಪ್ರಮಾಣದ ಚರ್ಮ ಲಭ್ಯವಿಲ್ಲ ಹಾಗಾಗಿ ಚರ್ಮವನ್ನು ದಾನ ನೀಡುವುದಕ್ಕೆ ದಾನಿಗಳು ಹಿಂದೇಸರಿಯುತ್ತಿದ್ದಾರೆ. ಹಾಗಾಗಿ ಹೆಚ್ಚನ ಮಟ್ಟದಲ್ಲಿ ಚರ್ಮದಾನ ಮಾಡಬೇಕು ಎಂದು ಹೇಳಿದ್ದಾರೆ.